ನಂದೇ ನಾನೋದಿದೆ

Author : ಜೋಳದರಾಶಿ ದೊಡ್ಡನಗೌಡ

Pages 672

₹ 100.00




Year of Publication: 1998
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560062
Phone: 080-22107764

Synopsys

ನಂದೇ ನಾನೋದಿದೆ ಇದೊಂದು ಆತ್ಮ ಕಥನವಾಗಿದೆ. ಈ ಕೃತಿಯು ಗಮಕ ಕಲಾನಿಧಿ ಜೋಳದ ರಾಶಿ ದೊಡ್ಡನಗೌಡರ ಆತ್ಮ ಕಥನವನ್ನು ಸಾರಸಗಟಾಗಿ ಹೇಳುತ್ತದೆ. ಈ ಕೃತಿಯನ್ನು ಓದುತ್ತಿದ್ದಂತೆಯೇ ಅವರ ಜೀವನದಲ್ಲಿ ನಡೆದ ಎಲ್ಲಾ ಘಟನೆಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಓದುಗರ ಬಾಲ್ಯದ ನೆನಪುಗಳು ಅವರ ಜೀವನದಲ್ಲಿ ನಡೆದ ಘಟನೆಗಳು ಎಲ್ಲವ್ನನು ಕಣ್ಣ ಮುಂದೆ ತಂದು , ಓದುಗರನ್ನು ಅವರದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಇದು ಕೇವಲ ದೊಡ್ಡಣಗೌಡ ರ ಬದುಕನ್ನು ಮಾತ್ರವಲ್ಲದೇ ನಾವು ನಮ್ಮ ಯವ್ವನವನ್ನು, ಅಮೂಲ್ಯವಾದ ಬಾಲ್ಯದ ಜೀವನವನ್ನು ಎಲ್ಲದರ ದೃಶ್ಯಗಳು ಕಣ್ಣ ಮುಂದೆ ಗೋಚರವಾದಂತೆ ಈ ಕೃತಿಯೂ ಮಾಡುತ್ತದೆ. ಈ ಕೃತಿಯು ಬಹಳ ಸುಂದರವಾಗಿ ದೊಡ್ಡಣ ಗೌಡ ರ ಆತ್ಮಕಥನದ ಜೊತೆಗೆ ನಮ್ಮ ಬಾಲ್ಯದ ನೆನಪುಗಳನ್ನು ನೆನಪಿಸಿಕೊಡುವಲ್ಲಿ ಯಶಸ್ವಿಯಾಗಿದೆ.

About the Author

ಜೋಳದರಾಶಿ ದೊಡ್ಡನಗೌಡ
(27 July 1910 - 10 May 1994)

ನಾಟಕಕಾರ, ಕವಿ, ಗಮಕಿ ಜೋಳದರಾಶಿ ದೊಡ್ಡನಗೌಡರು 1910 ಜುಲೈ 27ರಂದು ಬಳ್ಳಾರಿ ಜಿಲ್ಲೆಯ ಜೋಳದರಾಶಿ ಗ್ರಾಮದಲ್ಲಿ ಜನಿಸಿದರು. ತಂದೆ ಪಂಪನಗೌಡರು, ತಾಯಿ ರುದ್ರಮ್ಮ. ಜೋಳದರಾಶಿಯಲ್ಲಿಯೇ ಶೀಕ್ಷಣ ಪಡೆದ ಇವರು ಬಯಲಾಟದಲ್ಲಿ ವೇಶಕಟ್ಟುವುದರಲ್ಲಿ ತೊಡಗಿಕೊಂಡರು. ಕನ್ನಡ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಕನಕದಾಸರ ಪಾತ್ರ ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದೆ.  ಕನ್ನಡ ಮತ್ತು ತೆಲುಗು ಭಾಷೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ರಸವರ್ಷ, ಯಾತ್ರಿಕ, ನಮ್ಮ ಹಂಪೆ, ಗೌಡತಿ ಬರಲ್ಲಿಲ್ಲ, ರಾಮೇಶನ ವಚನಗಳು   ನೋಡ್ರವ್ವ ನಾಟಕ, ಅಭಯ, ಸಾಯದವನ ಸಮಾಧಿ, ಕ್ರಾಂತಿ ಪುರುಷ, ಕನಕದಾಸ ನಂದೇ ...

READ MORE

Related Books