'ಎಳೆದ ತೇರು' ಡಾ. ವ್ಯಾಸರಾವ್ ನಿಂಜೂರ್ ಅವರ ಆತ್ಮಕಥನವಾಗಿದೆ. ಲೇಖಕನೇ ಕೆಲ ಮಾತುಗಳನ್ನು ಹೇಳುವುದೆಂದರೆ ಅದು ನನ್ನ ಮಟ್ಟಿಗೆ ಸ್ವಲ್ಪ ಮುಜುಗರದ ವಿಷಯವೇ. ಆತ್ಮಕಥೆಯಲ್ಲಿ ತನ್ನನ್ನು ಲೇಖಕ ವೈಭವೀಕರಿಸುವುದು, ತನಗಿಷ್ಟವಾಗದವರ ಕುರಿತು ಅಸಡ್ಡೆ ತೋರಿಸುವುದು ಅಥವಾ ಆರೋಪ ಹೊರಿಸುವುದು - ಇಂತಹುದು ಆಗಾಗ ಕಂಡುಬರುವುದು ಸಾಮಾನ್ಯ. ಇಂತಹ ತಪ್ಪುಗಳನ್ನು ನಾನು ಮಾಡಿಲ್ಲ ಎಂದು ನಂಬಿದ್ದೇನೆ. ಸ್ವಲ್ಪ ತಮಾಷೆಯ ಮಾತುಗಳನ್ನು ಸೇರಿಸಿರಬಹುದು, ಅಷ್ಟೆ. ಬರಹ ವಸ್ತುನಿಷ್ಠವಾಗಿರುವಂತೆ ಪ್ರಯತ್ನಪಟ್ಟಿದ್ದೇನೆ. ಹೀಗಾಗಿ ಕೆಲವರ ಬಗ್ಗೆ ಸಣ್ಣ ಪುಟ್ಟ ಕಟುನುಡಿಗಳು ಬಂದಿರಬಹುದು. ಇವು ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಬಳಸಲ್ಪಟ್ಟಿವೆಯೇ ಹೊರತು ವೈರವನ್ನು ಸಾಧಿಸಲು ಉಪಯೋಗಿಸ ಲ್ಪಟ್ಟಿಲ್ಲ ಎಂದು ಸ್ಪಷ್ಟೀಕರಿಸಲು ಬಯಸುತ್ತೇನೆ. ಎಂದು ಲೇಖಕರು ಹೇಳಿದ್ದಾರೆ.
©2023 Book Brahma Private Limited.