ಕೊನೆಯ ಬ್ರಾಹ್ಮಣ

Author : ಡಿ. ವೆಂಕಟ ರಾವ್

Pages 40

₹ 35.00
Year of Publication: 2006
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ವಿಚಿತ್ರ ಧರ್ಮಸಂಕಟದಿಂದ ಈ ಜೀವನಚರಿತ್ರೆಯು ಆರಂಭವಾಗುತ್ತದೆ . ಈ ಕಥನದ ಮುಖ್ಯಪಾತ್ರ ರಾಣೀ ನರಸಿಂಹ ಶಾಸ್ತ್ರಿ. ಅವರು ೨೦೦೧ಕ್ಕೆ ಎಂಬತ್ತು ವರ್ಷ ತುಂಬಿ ಅನಾರೋಗ್ಯದಿಂದ್ದಾರೆ; ಆದರೆ ಅನಾರೋಗ್ಯಕ್ಕೂ ಮಿಗಿಲಾದ ಚಿಂತೆಯೊಂದು ಅವರನ್ನು ಬಾಧಿಸತೊಡಗಿದೆ- ಅವರ ಅಂತ್ಯಸಂಸ್ಕಾರಗಳನ್ನು ಸಾಂಪ್ರದಾಯಿಕವಾಗಿ ನಡೆಸುವ ಉತ್ತರಾಧಿಕಾರಿ ಸಿಕ್ಕಿಲ್ಲ ಅಂತ. ಹಾಗೆಂದರೆ ಅವರಿಗೆ ಮಕ್ಕಳಿಲ್ಲ ಎಂದೇನಲ್ಲ. ಅವರಿಗೆ ಇಬ್ಬರು ಮಕ್ಕಳಿದ್ದಾರೆ- ಆದರೆ, ಅವರಲ್ಲೊಬ್ಬ ನಾಸ್ತಿಕನಾಗಿ ಸಂಪ್ರದಾಯ ತೊರೆದಿದ್ದಾನೆ. ಇನ್ನೊಬ್ಬ ಮಗ, ‘ಬ್ರಾಹ್ಮಣ ಸಂಪ್ರದಾಯ’ವನ್ನು ತೊರೆದು ‘ಹಿಂದೂ ಧರ್ಮ’ಕ್ಕೆ ಪರಿವರ್ತಿತನಾಗಿ ಹಿಂದುತ್ವ ಸಂಘಟನೆ ಸೇರಿದ್ದಾನೆ. ತಮ್ಮ ಇಡೀ ಬದುಕನ್ನು ತಾವು ನಂಬಿದ ‘ಆರ್ಷೇಯ ಪರಂಪರೆ’ಯ ಮಾರ್ಗದಲ್ಲಿ ಬದುಕಿದ ಶಾಸ್ತ್ರಿಗಳಿಗೆ ಈ ಇಬ್ಬರು ಮಕ್ಕಳೂ ಈಗ ‘ಮತಾಂತರ’ಗೊಂಡಂತೆ ಕಾಣುತ್ತಿದ್ದಾರೆ. ಇದು ಅವರ ಧರ್ಮ ಸಂಕಟಕ್ಕೆ ಮೂಲ. ಇಂಥ ವಿಚಿತ್ರ ಸಮಸ್ಯೆಯಿಂದ ಆರಂಭವಾಗುವ ಪುಸ್ತಕದಲ್ಲಿ ನರಸಿಂಹಶಾಸ್ತ್ರಿಗಳ ಬದುಕು, ನಂಬಿಕೆ ಮತ್ತು ದರ್ಶನಗಳ ಲೋಕ ಬಿಚ್ಚುತ್ತದೆ.

Related Books