ಭಾರತೀಯ ಎಡಪಂಥೀಯ ವಿಚಾರಧಾರೆ ಹಾಗೂ ಕಮ್ಯುನಿಸ್ಟ್ ಪಕ್ಷದಲ್ಲಿ ಇ.ಎಂ.ಎಸ್. ನಂಬೂದಿರಿಪಾಡ್ ದೊಡ್ಡ ಹೆಸರು. ’ಇಎಂಎಸ್’ ಎಂದೇ ಗುರುತಿಸಲಾಗುತ್ತಿದ್ದ ಅವರು ನೆನಪುಗಳನ್ನು ’ಒಬ್ಬ ಭಾರತೀಯ ಕಮ್ಯೂನಿಸ್ಟನ ನೆನಪುಗಳು’ ಕೃತಿಯಲ್ಲಿ ದಾಖಲಿಸಿದ್ದಾರೆ.
ಇದು ಇಎಂಎಸ್ ಅವರ ಜೀವನ ಚರಿತ್ರೆ ಮಾತ್ರವಲ್ಲ. ಕೇರಳದ ಸಂಪ್ರದಾಯಸ್ಥ ನಂಬೂದಿರಿ ಬ್ರಾಹ್ಮಣ ಜಾತಿಯ ಜೆನ್ನಿ ಭೂಮಾಲೀಕ ಕುಟುಂಬದಲ್ಲಿ ಹುಟ್ಟಿ ತನ್ನ ಸಮುದಾಯದ ಎಲ್ಲಾ ಕಂದಾಚಾರಗಳನ್ನು ವಿರೋಧಿಸುತ್ತಾ ಬೆಳೆದವರು ಇಎಂಎಸ್. ಸ್ವಾತಂತ್ರ್ಯ ಚಳುವಳಿಯನ್ನು ಪ್ರವೇಶಿಸಿದ ಅವರು ಮೊದಲು ಕಾಂಗ್ರೆಸಿಗನಾಗಿ ಮತ್ತು ಆನಂತರ ಕಮ್ಯೂನಿಸ್ಟರಾದರು. ಇಎಂಎಸ್ ಅವರ ಜೀವನದ ಉದ್ದಕ್ಕೂ ವ್ಯಾಪಿಸಿದ ರಾಷ್ಟ್ರೀಯ ಚಳುವಳಿಯ ಪ್ರಮುಖ ಮಜಲುಗಳನ್ನು ಈ ಕೃತಿಯಲ್ಲಿ ಗಮನಿಸಬಹುದು. ಇಪ್ಪತ್ತನೇ ಶತಮಾನದ ಬಹುತೇಕ ಕಾಲಾವಧಿಯಲ್ಲಿ ಬದುಕಿದ್ದ ಅವರದು 89 ವರ್ಷಗಳ ತುಂಬು ಜೀವನ. ಇಪ್ಪತ್ತನೇ ಶತಮಾನದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳನ್ನು ಎಲ್ಲಾ ಕಾಲಘಟ್ಟಗಳಲ್ಲೂ ಅವರು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಿದ್ದರು.
ಇಎಂಎಸ್ ಅವರ Reminiscences of An Indian Communist ಎಂಬ ಕೃತಿಯನ್ನು ಬಿ. ಮಾಧವ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2023 Book Brahma Private Limited.