ಸಂವಿಧಾನದ ಕಾಲಾಳು

Author : ಸತ್ಯಾ ಎಸ್.

Pages 272

₹ 210.00




Year of Publication: 2019
Published by: ಕ್ರಿಯಾ ಪ್ರಕಾಶನ
Address: ಸಂ. 40, ಸುರಿಭವನ, 16ನೇ ಅಡ್ಡರಸ್ತೆ, 2ನೇ ಬಿ ಮುಖ್ಯರಸ್ತೆ, ಸಂಪಂಗಿ ರಾಮನಗರ, ಬೆಂಗಳೂರು-560027
Phone: 080-22234369/9448578021

Synopsys

ಪ್ರಗತಿಪರ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ಹಾಗೂ ನ್ಯಾಯಕ್ಕಾಗಿ ಯಾವುದೇ ರಾಜಿ ಇಲ್ಲದೆ ದಿಟ್ಟತನದಿಂದ ಹೋರಾಟ ನಡೆಸುತ್ತಿರುವ ತೀಸ್ತಾ ಅವರನ್ನು ಪರಿಚಯಿಸುವ ಕೃತಿ. ತಮ್ಮ ತಾತ ಮತ್ತು ತಂದೆಯ ಪ್ರಭಾವವನ್ನು, ಪತ್ರಕರ್ತರಾಗಿ ತಮ್ಮ ಆರಂಭಿಕ

ವೃತ್ತಿಯನ್ನು ಬಾಬರಿ ಮಸೀದಿ ಉರುಳಿದ ನಂತರ ಮುಂಬೈಯನ್ನು ಅಲುಗಾಡಿಸಿದ ಹಿಂಸೆಯ ಸಂದರ್ಭದಲ್ಲಿ ತಾವು ಗಳಿಸಿದ ರಾಜಕೀಯ ಪ್ರೌಢಿಮೆಯನ್ನು, ಸಂಗಾತಿ ಜಾವೇದ್ ಅವರೊಂದಿಗೆ ನಡೆದ ಸಾಮಾಜಿಕ ಚಟುವಟಿಕೆಗಳನ್ನು ಗೊಧ್ರಾದ ಮೊದಲ ಹಾಗೂ ನಂತರ ಗುಜರಾತಿನಲ್ಲಿ ಘಟಿಸಿದ್ದನ್ನು ಇಲ್ಲಿ ದಾಖಲಿಸಿದ್ದಾರೆ.

ತೀಸ್ತಾ ಅವರ ಪುಸ್ತಕವನ್ನು ಹಿರಿಯ ಪತ್ರಕರ್ತೆ ಎಸ್. ಸತ್ಯಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಸತ್ಯಾ ಎಸ್.

ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಇರುವ ಸತ್ಯಾ ಎಸ್ ಆವರು ಮೂಲತಃ ಪತ್ರಕರ್ತೆ. ಮುಖ್ಯವಾಹಿನಿ ಪತ್ರಿಕೋದ್ಯಮ ತೊರೆದು ಸ್ವಲ್ಪ ಕಾಲ ಸಂಶೋಧನೆ, ಬರವಣಿಗೆಗಳಲ್ಲಿ ತೊಡಗಿಸಿಕೊಂಡವರು. ಇತ್ತೀಚಿನ ವರ್ಷಗಳಲ್ಲಿ ಸ್ವತಂತ್ರ ಸಂವಹನ ಸಮಾಲೋಚಕರಾಗಿ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್, ಶಿಕ್ಷಣ, ಆರೋಗ್ಯ, ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳಾಪರ ಹಾಗೂ ಕೋಮುವಾದ ವಿರೋಧಿ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆಯನ್ನು ದಾಖಲಿಸುವ ಪ್ರಯತ್ನ ನಡೆಸಿದ್ದಾರೆ. ’ನೆಲದ ಸಿರಿ’ ಇವರ ಸಂಪಾದಿತ ಕೃತಿ. ...

READ MORE

Related Books