ಪಾಟೀಲ ಪುಟ್ಪಪ್ಪನವರು ಕರ್ನಾಟಕ ಕಂಡ ಧೀಮಂತ ಹಾಗೂ ನಮ್ಮ ಕಾಲದ ಅತ್ಯಂತ ಮಹತ್ವದ ಪತ್ರಕರ್ತರಲ್ಲಿ ಒಬ್ಬರು. ಪಾಪು ಮಾತಾಡಿದರೆ ಇಡೀ ರಾಜ್ಯವೇ ಕೇಳಿಸಿಕೊಳ್ಳುತ್ತದೆ. ಕನ್ನಡ ಭಾಷೆ, ಗಡಿ, ಸಂಸ್ಕೃತಿ, ಇತಿಹಾಸ, ಪರಂಪರೆ, ನೆಲ-ಜಲದ ಬಗ್ಗೆ ಅವರ ಕಾಳಜಿ ಅನನ್ಯ. ಈ ಅಂಶಗಳಿಗೆ ಸ್ವಲ್ಪ ಧಕ್ಕೆಯಾದರೂ ಸಾಕು, ಪಾಪು ದನಿ ಎತ್ತುತ್ತಾರೆ. ಯಾವ ಸರಕಾರ ಅಧಿಕಾರದಲ್ಲಿರಲಿ, ಯಾರೇ ಮುಖ್ಯಮಂತ್ರಿಯಾಗಿರಲಿ ಅವರಿಗೆ ತಮ್ಮ ಮಾತಿನ ಚಾಟಿ ಏಟು ನೀಡಲು ಅವರು ಹಿಂದೇಟು ಹಾಕುವುದಿಲ್ಲ. ಹಾಗೆ ನೋಡಿದರೆ ಪಾಪು ಒಬ್ಬ ಹೋರಾಟಗಾರ ಪತ್ರಕರ್ತ, ಕರ್ನಾಟಕದ ವಕ್ತಾರ ಹಾಗೂ ಕನ್ನಡದ ರಾಯಭಾರಿ. ಅವರ ಆತ್ಮಕಥೆಯನ್ನು ಸರಜೂ ಕಾಟ್ಕರ್ ಅವರು ನಿರೂಪಿಸಿದ್ದಾರೆ.
©2023 Book Brahma Private Limited.