ಹಿಂದೂ ಮಹಾರಾಣಿ ಆಗಬೇಕೆಂದು ಅಪೇಕ್ಷಿಸಿದ್ದ ಹೆಣ್ಣು ಮೊಗಲ್ ರಾಜಕುಮಾರಿ ಬೇಗಮ್ ಜಹನಾರಾ ಆತ್ಮಕಥೆಯನ್ನು ಲೇಖಕ ಸಂತೆ ನಾರಾಯಣ ಸ್ವಾಮಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿ ಇಲ್ಲಿ ಕೊಟ್ಟಿದ್ದಾರೆ. 1659ರಲ್ಲಿ ಸಹೋದರ ಔರಂಗಜೇಬ್ ಆಕೆಯನ್ನು ಆಗ್ರಾ ಕೋಟೆಯ ಜೆಸ್ಸಾಮಿನ್ ಗೋಪುರದಲ್ಲಿ ಬಂಧನದಲ್ಲಿಟ್ಟಾಗ ಆಕೆ ತನ್ನ ಆತ್ಮಕಥೆ ಬರೆದುಕೊಂಡಿದ್ದಳು. ಹಿಂದೂ ಪುರಾಣದ ವ್ಯಕ್ತಿಗಳ ಜೀವನವನ್ನು ತನ್ನ ಜೀವನದ ಜತೆ ಹೋಲಿಸಿಕೊಳ್ಳಲು ಯತ್ನಿಸಿರುವುದನ್ನು ಇಲ್ಲಿ ಕಾಣಬಹುದು. ನಾನು ಬಾದ್‌ಶಹ ಬೇಗಮಳಲ್ಲವೆ? ನಾನು ಸಹ ರಾಜದಂಡ ಹಿಡಿದುಕೊಂಡು ರಾಜಾಜ್ಞೆಗಳನ್ನು ಜಾರಿಗೊಳಿಸುವ ಅಧಿಕಾರ ಹೊಂದಿದ್ದೆ. ಆದರೆ ನನಗೆ ಹಿಂದೂ ಚರಿತ್ರೆಯ ನಳನಂತಹ ಇಲ್ಲವೇ ಅಯೋಧ್ಯೆಯ ಶ್ರೀರಾಮನಂತಹ ಗಂಡನೇ ಇಲ್ಲವಲ್ಲ, ದುಃಖ ದುಮ್ಮಾನ, ರೋಷ ಕೋಪಗಳಿಂದ ನನ್ನಲ್ಲಿಯೇ ನಾನು ಬೆಂದುಹೋದೆ ಎಂದು ಆತ್ಮಕಥನಲ್ಲಿ ವಿವರಿಸಿದ್ದಾಳೆ.
©2025 Book Brahma Private Limited.