ಅಲೆಮಾರಿಯ ಅಂತರಂಗ

Author : ಕುಪ್ಪೆ ನಾಗರಾಜ

Pages 216

₹ 160.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಅಂಚೆಪಟ್ಟಿಗೆ ಸಂಖ್ಯೆ:5159 ಬೆಂಗಳೂರು-560 001
Phone: 080-22203580/0

Synopsys

`ಅಲೆಮಾರಿಯ ಅಂತರಂಗ’ ಕೃತಿಯು ಕುಪ್ಪೆ ನಾಗರಾಜ ಅವರ ಆತ್ಮಕಥೆಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕಪ್ಪು ಮೋಡಗಳು ಕರಗಿ ಭೂಮಿಗಿಳಿದ ದಿಕ್ಕಿನತ್ತ ಹಾರುವ ವಲಸೆ ಹಕ್ಕಿಗಳಂತೆ ಬದುಕು ಹುಡುಕಿ ಊರುಕೇರಿಗಳತ್ತ ಚದುರಿ ಹೋಗುವ ಅಲೆಮಾರಿ ಜನಾಂಗ. ಅವರ ಆಚಾರ, ವಿಚಾರ, ನಂಬಿಕೆ, ಮೂಢನಂಬಿಕೆಗಳೆಲ್ಲ ಶ್ರೀ ಕುಪ್ಪೆ ನಾಗರಾಜ ಅವರ ಆತ್ಮಕಥೆಯ ಕವಚದಲ್ಲಿ ಅನಾವರಣಗೊಂಡಿರುವುದು ವಿಶೇಷ. ಸಮುದಾಯವನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಪ್ರಯತ್ನ, ಬದಲಾವಣೆಯನ್ನು ಒಪ್ಪಿಕೊಳ್ಳಲಾಗದೆ ಗೊಂದಲಕ್ಕೆ ಸಿಕ್ಕಿಬೀಳುವ ಸಂಸ್ಕೃತಿ, ಅವರ ಅಸಹಾಯಕತೆ, ಸಂಕಷ್ಟ - ಸವಾಲುಗಳೆಲ್ಲ ಸಹಜ ನಿರೂಪಣೆಯಿಂದ ಓದುಗನ ಮನ ಕಲುಕುತ್ತವೆ. ಅಧ್ಯಯನದ ಹಿಡಿತಕ್ಕೆ ಎಂದೂ ಸುಲಭವಾಗಿ ತೆರೆದುಕೊಳ್ಳದ ಅಲೆಮಾರಿಗಳ ಬದುಕಿನ ಒಳನೋಟ ಸಮಾಜ ವಿಜ್ಞಾನಿಗಳಿಗೆ  ಉಚಿತ ಉಡುಗೊರೆಯಾಗಬಹುದು. ಇದಲ್ಲದೆ, ಮೀಸಲಾತಿ ಏಕೆ ಬೇಕು? ಎಂದು ನಗರದ ಬೀದಿಗಳಲ್ಲಿ ನಿಂತು ಚರ್ಚಿಸುವ ವರ್ಗಕ್ಕೆ ಈ ಕೃತಿಯ ಅಂತರಾಳ ಉತ್ತರವಾಗಬಹುದು ಎನ್ನುವುದು ಇಲ್ಲಿ ವಿಶ್ಲೇಷಿತವಾಗಿದೆ.

About the Author

ಕುಪ್ಪೆ ನಾಗರಾಜ

ಕುಪ್ಪೆ ನಾಗರಾಜ ಅವರು ಸಮಾಜದ ಅಲಕ್ಷಿತ ಸಮುದಾಯದ ಕುಟುಂಬದಿಂದ ಬಂದವರು. ಸ್ವ-ಸಾಮರ್ಥ್ಯದಿಂದ ಆಶ್ರಮ ಶಾಲೆಯಲ್ಲಿ ಕಲಿತು ವಿದ್ಯಾಭ್ಯಾಸ ಮಾಡಿದವರು. ವಿದ್ಯಾರ್ಥಿ ದೆಸೆಯಿಂದಲೇ ದಲಿತ ಮತ್ತು ಪ್ರಗತಿಪರ ಚಳುವಳಿಗಳಲ್ಲಿ ಭಾಗಿಯಾಗಿರುವ ಅವರು ಇದೀಗ ಕರ್ನಾಟಕ ಖಜಾನೆ ಇಲಾಖೆಯಲ್ಲಿ ಪತ್ರಾಂಕಿತ ಉಪಖಜಾನಾಧಿಕಾರಿ. ಪ್ರಶಸ್ತಿಗಳು : ಅಲೆಮಾರಿ ಸಿರಿ, ಸುವರ್ಣ ಕನ್ನಡಿಗ, ಬೋಧಿವರ್ಧನ ಇವರಿಗೆ ದೊರೆತ ಪ್ರಶಸ್ತಿಗಳು.  ಕೃತಿಗಳು : ಅಲೆಮಾರಿಯ ಅಂತರಂಗ ...

READ MORE

Related Books