ಲೇಖಕ ಟಿ.ಕೆ. ಪ್ರೇಮಕುಮಾರ ಅವರ ಆತ್ಮಕಥೆ-ಕರ್ಮ ಕೆಫೆ. ತಮ್ಮ ಎಲ್ಲ ಸಂಕಷ್ಟಗಳ ಪರಿಹಾರಕ್ಕೆ ಲೇಖಕರು ಆಶ್ರಯಿಸಿದ್ದು ಉತ್ತಮ ಗ್ರಂಥಗಳನ್ನು ಹಾಗೂ ಅಧ್ಯಾತ್ಮ ಗುರುಗಳ ಕೃಷೆಯನ್ನು. ಅವರ ಉಪದೇಶಾತ್ಮಕ ಭಾಷಣಗಳನ್ನು. ಅಧ್ಯಾತ್ಮಿಕತೆಯ ಪ್ರಾಮುಖ್ಯತೆ ಹಾಗೂ ಪ್ರಯೋಜನವು ಇತರರಿಗೂ ಸಿಗಲಿ ಎಂದ ಆಶಯದೊಂದಿಗೆ ಕರ್ಮ ಕೆಫೆ ಬರೆಯಲಾಗಿದೆ. ಇಲ್ಲಿ ಕರ್ಮದ ಮೌಢ್ಯ ಪ್ರತಿಪಾದನೆ ಇಲ್ಲ. ಆದರೆ, ಉತ್ತಮ ಕರ್ಮಗಳಿಂದ ಉತ್ತಮ ಫಲಿತಾಂಶ ಬರುತ್ತದೆ ಎಂಬ ನಂಬಿಕೆ ಲೇಖಕರದ್ದು. ಆದರೆ, ನಂಬಿಕೆಯ ಮಿತಿಯನ್ನೂ ಸಹ ಲೇಖಕರು ಗುರುತಿಸಿ ತಮ್ಮ ವಿಚಾರವನ್ನು ಮಂಡಿಸಿದ್ದು, ಓದುಗರ ಗಮನ ಸೆಳೆಯುತ್ತದೆ.
©2023 Book Brahma Private Limited.