ಮೋಟಾರ್‌ ಸೈಕಲ್ ಡೈರಿ

Author : ಎಚ್.ಎಸ್. ಅನುಪಮಾ

Pages 200

₹ 150.00




Year of Publication: 2014
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಲಾಡ್ಜ್, ಗದಗ-582101
Phone: 9480286844

Synopsys

ದಕ್ಷಿಣ ಅಮೇರಿಕ ರಾಷ್ಟ್ರಗಳ ಸುತ್ತಾಟದಲ್ಲಿ ಹರಯದ ಹುಡುಗ ಕ್ರಾಂತಿಕಾರಿಯಾಗುವ ಪ್ರವಾಸ ಕಥನವೇ ’ಮೋಟಾರ್ ಸೈಕಲ್ ಡೈರಿ’ ಕೃತಿ. ಸಾಹಸಗಳನ್ನು ಮನಮುಟ್ಟುವಂತೆ ವರ್ಣಿಸುತ್ತಾ  ಸಾಗುವ ಈ  ಕೃತಿಯನ್ನು ಓದುತ್ತ ಹೋದಂತೆ ಎಳೆಯ ಅರ್ನೆಸ್ಟೋನ್ ಓದುಗರಲ್ಲಿ ಒಬ್ಬನಾಗುತ್ತಾನೆ.   ಸಾಹಸ ಯಾತ್ರೆಯ ಸಲುವಾಗಿ ಹೊರಟ ಅರ್ನೆಸ್ಕೋ,ಮಹಾನ್ ಕೆಲಸ ಮಾಡುವ ಕನಸಿನ  ಅಖಂಡದ ವಾಸ್ತವಕ್ಕೆದುರಾದೊಡನೆ ಮನುಷ್ಯನಾಗಿ ಅರಳುತ್ತಾನೆ, ವಿಹರಿಸುತ್ತಾನೆ. ಸಾಮಾಜಿಕ ವ್ಯಕ್ತಿಯಾಗಿ ಪರಿವರ್ತನೆಗೊಳ್ಳುತ್ತಾನೆ.

ಪ್ರಯಾಣ, ಯಾತ್ರೆಯ ಕುರಿತಂತೆ ಓದುಗರಿಗೊಂದು  ಹೊಸ ಒಳನೋಟವನ್ನು ಈ ಕೃತಿ ನೀಡುತ್ತದೆ. ಮನೆಯೊಳಗೆ ಕೂತವರಿಗೆ ಮೋಟಾರ್ ಸೈಕಲನ್ನು ನೋಡಿದಾಕ್ಷಣ ಇದ್ದಕ್ಕಿದ್ದಂತೆಯೇ ಏರಿ ಬಿಟ್ಟರೆ ಹೇಗೆ ಎಂಬ ಆಲೋಚನೆಗೆ ಅಣಿಮಾಡುವ ಈ ಕೃತಿಯನ್ನು ಕನ್ನಡಕ್ಕೆ ತಂದ ಲೇಖಕಿ ಎಚ್. ಎಸ್. ಅನುಪಮಾ ಅವರ ಅನುವಾದ ಅಪೂರ್ವವಾದುದು. 

About the Author

ಎಚ್.ಎಸ್. ಅನುಪಮಾ

ಲೇಖಕಿ, ಕವಯತ್ರಿ ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಕಾಡುಹಕ್ಕಿಯ ಹಾಡು, ಸಹಗಮನ, ಬುದ್ಧ ಚರಿತೆ (ಖಂಡ ಕಾವ್ಯ), ನೆಗೆವ ಪಾದದ ಜಿಗಿತ, ಸಬರಮತಿ- ನೀಳ್ಗವಿತೆ ಎಂಬ ಐದು ಕವನ ಸಂಕಲನಗಳು, ಹೂವರಳಿದ್ದಕ್ಕೆ ಯಾಕೆ ಸಾಕ್ಷಿ?, ಚಿವುಟಿದಷ್ಟೂ ಚಿಗುರು, ಕೋವಿಡ್: ಡಾಕ್ಟರ್ ಡೈರಿ - ಗ್ರಾಮಭಾರತದ ಕಥೆಗಳು  ಎಂಬ ಮೂರು ಕಥಾಸಂಕಲನಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ – ಕಿರು ಜೀವನ ಚರಿತ್ರೆ , ಮೋಚಕನ ಹೆಜ್ಜೆಗಳು - ಡಾ. ...

READ MORE

Related Books