ನನ್ನ ಸಾಹಿತ್ಯ ಪ್ರೇರಣೆಯ ನೆಲೆಗಳು

Author : ಸಂಗಮೇಶ ತಮ್ಮನಗೌಡ್ರ

Pages 72

₹ 50.00
Year of Publication: 2011
Published by: ನೀಲಾ ಪ್ರಕಾಶನ
Address: ಗುಜಮಾಗಡಿ, ತಾ: ರೋಣ, ಜಿ: ಗದಗ-582 102

Synopsys

ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ತಮ್ಮ ಸಾಹಿತ್ಯಕ ಅನುಭವಗಳನ್ನು ಆತ್ಮಚರಿತ್ರೆಯ -4ರ ಭಾಗವಾಗಿ ಪ್ರಕಟಿಸಿದ ಕೃತಿ-ನನ್ನ ಸಾಹಿತ್ಯ ಪ್ರೇರಣೆಯ ನೆಲೆಗಳು. ಭೂಮಿಯ ಮೇಲೆ ಬದುಕುವುದು ಕೆಲ ವರ್ಷಗಳೇ ಆದರೂ ಮನುಷ್ಯ ತಾನು ನೆಮ್ಮದಿಯಿಂದ ಇದ್ದು ಇತರರನ್ನು ನೆಮ್ಮದಿಯಾಗಿ ಜೀವಿಸಲು ಬಿಡಲಾರನು. ಇದರಿಂದ ಯಾರೂ ನೆಮ್ಮದಿಯ ಜೀವನ ನಡೆಸಲಾಗದು. ಸಾಹಿತ್ಯವು ತಮಗೆ ಇಂತಹ ತತ್ವಗಳನ್ನು ಕಲಿಸಿದೆ ಎಂದೂ ಹಾಗೂ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದವರನ್ನು ಸ್ಮರಿಸುವುದು ತಮ್ಮ ಜೀವನದ ಬಹು ಮುಖ್ಯ ಭಾಗವೆಂದೂ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

ಸಾಹಿತ್ಯದ ನಿಜ ಸಂಸ್ಕಾರ ಕೊಟ್ಟವರು, ನನ್ನ ಬರವಣಿಗೆಯ ವಿಕಾಸಕ್ಕೆ ಬೆನ್ನು ಚಪ್ಪರಿಸಿದವರು, ಅನಿವಾರ್ಯ ಕಸುಬಾಗಿ ಬೆಳೆದ ನನ್ನ ಸಾಹಿತ್ಯ, ನನ್ನ ಸಾಹಿತ್ಯ ಬೆಳವಣಿಗೆಯಲ್ಲಿ ಅಪಸ್ವರದ ಪ್ರಸಂಗಗಳು, ಜನತೆಯತ್ತ ನನ್ನ ಸಾಹಿತ್ಯ ಯಾತ್ರೆ ಹೀಗೆ ಹಲವು ಅಧ್ಯಾಯಗಳ ಮೂಲಕ ತಮ್ಮ ಸಾಹಿತ್ಯ ರಚನೆಯ ನೆಲೆಗಳನ್ನು ಶೋಧಿಸುತ್ತಾ ಸಂಭ್ರಮಿಸುತ್ತಾರೆ.

About the Author

ಸಂಗಮೇಶ ತಮ್ಮನಗೌಡ್ರ
(15 January 1970)

ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...

READ MORE

Excerpt / E-Books

ಬಹುಜನರ ಪ್ರೇರಣೆಯಿಲ್ಲದೇ ಯಾವುದೇ ಒಬ್ಬ ಸಾಹಿತಿಯ ಬೆಳೆಯಲಾಗದು. ಗುರುವಿನ ಪ್ರೇರಣೆ, ಬರಹಗಾರರ ಹೇಶಣೆ, ಸಹೃದಯರ ಪ್ರೇರಣೆ, ಎಲ್ಲಕ್ಕೂ ಮಿಗಿಲಾಗಿ ತಂದೆ-ತಾಯಿಗಳ ಪ್ರೇರಣೆ ಅಗತ್ಯ. ಜನರ ಪ್ರೇರಣೆಯಿಂದ ನಾನು ಒಬ್ಬ ಸೃಜನಶೀಲ ಸಾಹಿತಿಯಾಗಿ ಬೆಳೆಯಲು ಕಾರಣವಾಯಿತು. ಬಹುಜನರ ಪ್ರೇರಣಾತ್ಮಕ ಋಣಾನುಬಂಧವು ನನ್ನ ಮೇಲಿದೆ. ಆ ನೆನಹಿನ ಪಾಮಾಣಿಕ ಪ್ರಯತ್ನವು ಈ ಕೃತಿಯಲ್ಲಿ ಆಗಿದೆ.

(ಕೃತಿಯ ಬೆನ್ನುಡಿಯಲ್ಲಿ ಬರೆದುಕೊಂಡ ಲೇಖಕರ ಮಾತುಗಳು...)

Related Books