ತನ್ನೂರಿನ ಚಿತ್ರಣವನ್ನು ಆತ್ಮೀಯವಾಗಿ ಕಟ್ಟಿಕೊಟ್ಟಿರುವ ಕೃತಿ ಪ್ರಮೀಳಾ ಸ್ವಾಮಿ ಅವರ ‘ಊರೆಂಬ ಉದರ’. ‘ಒಂದು ಸಂಕೇತಿ ಗ್ರಾಮದ ವೃತ್ತಾಂತ’ ಎನ್ನುತ್ತಲೇ ಬಾಲ್ಯ, ನನ್ನ ಊರು ಚಿನ್ನದ ಊರು, ಶಾಲೆ ಮತ್ತು ನನ್ನ ಸಹಪಾಠಿಗಳು, ಬೇಸಿಗೆ ಕಾಲ, ನಮ್ಮ ಮನೆ ಮತ್ತು ನಮ್ಮೂರು, ಬೇಸಿಗೆ ಕಾಲದ ಚಟುವಟಿಕೆಗಳು, ಕಾಫಿ, ತಿಂಡಿ ರೂಮು, ಮಾವಿನ ಮಿಡಿ, ಹಿಪ್ಪೆ, ಹರಳು, ಮಾವು, ಹೊಳೆ ಮತ್ತು ಹರಿಗೋಲು, ಮಳೆ ಹೊಲೆ, ಕಾಮಧೇನು, ಸಂಕೇತಿಗಳು, ಹಬ್ಬಗಳು, ಹಬ್ಬದ ತಿಂಡಿಗಳು, ನಮ್ಮೂರ ರಾಮನವಮಿ, ನಾಗರಪಂಚಮಿ, ನವರಾತ್ರಿ: ನಮ್ಮೂರು, ನಮ್ಮಮ್ಮ, ನಮ್ಮನೆ, ಊರಿನಲ್ಲಿ ದೀಪಾವಳಿ, ನಮ್ಮೂರ ಜಾತ್ರೆ... ಹೀಗೆ ತನ್ನೂರಿನ ಕುರಿತು ಕೃತಿಯಲ್ಲಿ ವಿವರಿಸಿದ್ದಾರೆ. ಕೃತಿಯ ಕುರಿತು ಸಾಹಿತಿ ವೈದೇಹಿ ಅವರು ಬರೆಯುತ್ತಾ, ’ಜೀವನದ ಮುಖ್ಯ ಕರ್ತವ್ಯ ಮುಗಿದ ಮೇಲೆ ಹಿರಿಯ ಜೀವವೊಂದು ಜಗಲಿಯಲ್ಲಿ ಮನೆ ಮಂದಿಯೊಂದಿಗೆ, ತನ್ನ ಸಂದಕಾಲದ ಮಾಯೆಯನ್ನು ಮೆಲುಕುವಂತೆ ಸುರುವಾಗುವ ಈ ಕೃತಿಯಲ್ಲಿ ಇವೆಲ್ಲ ಅವಿಭಾಜ್ಯವಾಗಿ ಅಂಟಿ ಬಂದಂತೆ, ಅಸಂಗತವೆನಿಸದಂತೆ, ಮುಂದಣ ಪೀಳಿಗೆಗಳಿಗೆ ದಾಟಿಸುವ ಸಿರಿ ಅರಿವಿನಂತೆ ಪ್ರಸ್ತಾಪವಾಗಿದೆ. ಇದರಿಂದಾಗಿ ಕೃತಿಗೆ ಅದರದೇ ಆದ ಅಸ್ಮಿತೆಯೂ ಪ್ರಾಪ್ತವಾಗಿದೆ. ಮತ್ತು ಇದು ಸುತರಾಂ ಒಬ್ಬ ಪುರುಷ ಬರೆಯಬಹುದಾದ ಬರವಣಿಗೆಯೇ ಅಲ್ಲ ಆಗಿಸಿದೆ’ ಎಂದು ವಿವರಿಸಿದ್ದಾರೆ.
©2023 Book Brahma Private Limited.