ಜೋಳಿಗೆಯ ಪವಾಡ

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 501

₹ 555.00




Year of Publication: 1994
Published by: ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ
Address: ಮಲ್ಲಾಡಿಹಳ್ಳಿ- 577531

Synopsys

‘ಜೋಳಿಗೆಯ ಪವಾಡ’ ಯೋಗ ಸಾಧಕ, ಲೇಖಕ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಆತ್ಮ ಚರಿತ್ರೆ. ಇಲ್ಲಿ ಜೋಳಿಗೆಯ ಪವಾಡ ಶೀರ್ಷಿಕೆಯಡಿಯಲ್ಲಿ ನಾಲ್ಕು ಅನುಬಂಧಗಳಲ್ಲಿ ವಿಚಾರಗಳನ್ನು ಪ್ರಸ್ತಾಪ ಮಾಡಲಾಗಿದೆ. ಅನುಬಂಧ ಒಂದರಲ್ಲಿ ತಿರುಕ ವಾಙ್ಮಯ, ಅನುಬಂಧ ಎರಡರಲ್ಲಿ ವಿವಿಧ ಸಂಸ್ಥೆಗಳು, ಅನುಬಂಧ ಮೂರರಲ್ಲಿ ವಿಶ್ವಸ್ತ ಸಮಿತಿಯ ಸದಸ್ಯರು, ಅನುಬಂಧ ನಾಲ್ಕರಲ್ಲಿ ಅಖಾಡಾ ತಯಾರಿಕೆ ಎಂಬ ವಿಭಾಗಗಳಲ್ಲಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಗಳ ಆತ್ಮಚರಿತ್ರೆಯನ್ನು ಬರೆಯಲಾಗಿದೆ.

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books