ನಾನು ಪಾಟೀಲ ಪುಟ್ಟಪ್ಪ ಭಾಗ - ೧

Author : ಪಾಟೀಲ ಪುಟ್ಟಪ್ಪ

Pages 328

₹ 250.00




Year of Publication: 2014
Published by: ಲೋಹಿಯಾ ಪ್ರಕಾಶನ
Address: ಕ್ಷಿತಿಜ, ಕಪ್ಪುಗಲ್ಲು ರಸ್ತೆ, ಬಳ್ಳಾರಿ ಜಿಲ್ಲೆ-583103
Phone: 08392257412

Synopsys

ಪಾಟೀಲ ಪುಟ್ಟಪ್ಪ ಅವರ ಸುಮಾರು ತೊಂಬತ್ತು ವರ್ಷಗಳ ಜೀವಿತಗಾಥೆಯನ್ನು ಈ ಕೃತಿ ಒಳಗೊಂಡಿದೆ. ಮೊದಲಿಗೆ ಇಡೀ ಉತ್ತರ ಕರ್ನಾಟಕದ ಝಲಕ್‌ಗಳು ಸಿಗುತ್ತವೆ. ಓದುತ್ತ ಹೋದಂತೆಲ್ಲ ಕರ್ನಾಟಕದ ಪ್ರದಕ್ಷಿಣೆ ಹಾಕಿದ ಅನುಭವವಾಗುತ್ತದೆ. ಪಾಟೀಲ ಪುಟ್ಟಪ್ಪ ಅವರು ಆತ್ಮಚರಿತ್ರೆ ಬರೆಯಲಾಗಲಿಲ್ಲವಾಗಿ, ಕಿರಿಯ ಮಿತ್ರ ಮ ಸರಜೂ ಕಾಟ್ಕರ ಅವರನ್ನು ಕೂರಿಸಿಕೊಂಡು ಒಂದು authorised biography ಬರೆಸಿದ್ದಾರೆ. ತಾವು ತಮ್ಮಿಂದಲೂ ದೂರ ನಿಂತು ತಮ್ಮನ್ನು ನೋಡಿಕೊಂಡ ಪ್ರಸಹನಗಳು ಇಲ್ಲಿ ಕಾಣಸಿಗುತ್ತವೆ.

About the Author

ಪಾಟೀಲ ಪುಟ್ಟಪ್ಪ
(14 January 1922 - 16 March 2020)

`ಪಾಪು’ ಎಂದೇ ಚಿರಪರಿಚಿತರಿರುವ ಪಾಟೀಲ ಪುಟ್ಟಪ್ಪ ಅವರು ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡವರು. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದವರು. ತಂದೆ ಸಿದ್ಧಲಿಂಗಪ್ಪ-ತಾಯಿ ಮಲ್ಲಮ್ಮ. 1922ರ ಜನೆವರಿ 4ರಂದು ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. 1949ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು. ‘ವಿಶಾಲ ಕರ್ನಾಟಕ’ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ‘ನವಯುಗ’ ಮಾಸಪತ್ರಿಕೆ ...

READ MORE

Related Books