ಗೌರಿಯೊಂದಿಗೆ ಏಕಾಂತ-ಲೋಕಾಂತ

Author : ರಾಜೇಶ್ವರಿ ಭೋಗಯ್ಯ

Pages 200

₹ 150.00




Year of Publication: 2021
Published by: ಚಾರು ಪ್ರಕಾಶನ
Address: # 83, ನೇ ಹಂತ ಪ್ರೈಡ್ ಪ್ಲಾಜಾ ಕಾಂಪ್ಲೆಕ್ಸ್, ಆದರ್ಶ ಕಾಲೇಜು ಹತ್ತಿರ, 5ನೇ ಮುಖ್ಯರಸ್ತೆ, ಬೆಂಗಳೂರು- 560018
Phone: 09448380637

Synopsys

ಲೇಖಕಿ ರಾಜೇಶ್ವರಿ ಭೋಗಯ್ಯ ಅವರ `ಗೌರಿಯೊಂದಿಗೆ ಏಕಾಂತ-ಲೋಕಾಂತ’ ಕೃತಿಯು ಒಂದು ಆಪ್ತ ಶೈಲಿಯ ಬರಹವಾಗಿದೆ..ದಶಕ ಕಾಲ ಗೌರಿಯವರೊಂದಿಗೆ ಅವರ ಒಡನಾಟ, ಆಪ್ತ ಗೆಳೆತನ ಹೊಂದಿದ್ದ ಲೇಖಕಿ, ಆ ದಿನಗಳನ್ನು ಹಲವಾರು ಘಟನೆ, ಪ್ರಸಂಗಗಳು, ಚರ್ಚೆ, ತಿರುಗಾಟಗಳು, ಓದು ಮತ್ತು ಹೋರಾಟಗಳ ವಿವರಗಳ ದಾಖಲೆ ಈ ಕೃತಿಯಲ್ಲಿ ಸಂಪಾದಿಸಿದ್ದಾರೆ.

ಗೌರಿಯವರ ಅಂತರಂಗದ ಮಾತುಗಳ ಸ್ಪರ್ಶವೂ ಈ ಬರಹಕ್ಕಿದೆ. ಲೇಖಕಿಯು ಹೇಳುವಂತೆ ಇದು ಗೌರಿಯ ಇಡೀ ಜೀವನದ ಕತೆಯಲ್ಲ. ಹಾಗೆಯೆ ನನ್ನ ಕತೆಯೂ ಅಲ್ಲ. ನನ್ನ ಹಾಗೂ ಅವರ ಹತ್ತು ವರ್ಷಗಳ ಸ್ನೇಹ ಮತ್ತು ಒಡನಾಟಗಳ ನೆನಪು. ಹೃದಯಕ್ಕೆ ಬಹಳವೇ ಒಳ್ಳೆಯದಾದ ಸಂಜೆಯಾದರೆ ಸ್ವಲ್ಪ ಬಾಡಿ ಬಗ್ಗುವ ಸೂರ್ಯಕಾಂತಿಯ ಹೂವಿನಂತೆ ಗೌರಿ- ನನ್ನ ಹೃದಯಕ್ಕೆ , ನನ್ನ ಮಾನಸಿಕ ಆರೋಗ್ಯಕ್ಕೆ ನನ್ನ ಪೆದ್ದುತನಕ್ಕೆ ಗೆಳೆತನದ ಚಿಕಿತ್ಸೆ ನೀಡಿದವರು.. ಸೂರ್ಯಕಾಂತಿಯ ಬೀಜಗಳು ಬಹಳ ಉಪಕಾರಿಯಾಗುವ ಹಾಗೆ ಸಮಾಜದ ಆಗು-ಹೋಗುಗಳಿಗೆ ನನ್ನ ಹೃದಯ ಆರೋಗ್ಯವಾಗಿ ಮಿಡಿಯುವಂತೆ ನೋಡಿಕೊಂಡವರು ಗೌರಿ’ ಎಂದು ಅಭಿಪ್ರಾಯಪಟ್ಟಿದ್ದಾರೆ. .

About the Author

ರಾಜೇಶ್ವರಿ ಭೋಗಯ್ಯ
(01 September 1965)

ಲೇಖಕಿ ರಾಜೇಶ್ವರಿ ಭೋಗಯ್ಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯವರು. ಆನೇಕಲ್, ದೊಡ್ಡಬಳ್ಳಾಪುರ, ಮಾಲೂರಿನಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದರು. ಓದುವುದು, ಕವನ ಬರೆಯುವುದು ಇರ ನೆಚ್ಚಿನ ಹವ್ಯಾಸಗಳಾಗಿವೆ.  ಕೃತಿ: ಗೌರಿಯೊಂದಿಗೆ ಏಕಾಂತ ಲೋಕಾಂತ ...

READ MORE

Related Books