ಕೀಟಲೆಯ ದಿನಗಳು (ಹೀಗೊಂದು ಆಕಸ್ಮಿಕ ಆತ್ಮಕಥನ)

Author : ಎಸ್.ಎನ್. ಲಕ್ಷ್ಮೀನಾರಾಯಣ

Pages 456

₹ 456.00




Year of Publication: 2023
Published by: ಅಮೂಲ್ಯ ಪುಸ್ತಕ
Address: 83/1, 15ನೇ ಮುಖ್ಯರಸ್ತೆ (ವಿಜಯನಗರ ಕ್ಲಬ್ ಎದುರು ರಸ್ತೆ), ವಿಜಯನಗರ, ಬೆಂಗಳೂರು 560040
Phone: 9448676770

Synopsys

'ಕೀಟಲೆಯ ದಿನಗಳು' ಎಸ್.ಎನ್. ಲಕ್ಷ್ಮೀನಾರಾಯಣ ಅವರ ಆತ್ಮಕಥನ. ಈ ಕೃತಿಗೆ ಹಿರಿಯ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಬೆನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ 'ತುಂಟತನ, ಕೀಟಲೆ ಬಾಲ್ಯದಲ್ಲಿ ಅಲಂಕಾರಗಳೇ ಆಗಿರುತ್ತವೆ. ಸಹಜ ಮುಗ್ಧತೆ, ಸತ್ಯ ಶುದ್ಧತೆ ಸುತ್ತಮುತ್ತಲವರಿಗೆ ಅಪೇಕ್ಷಣೀಯವೂ, ಕ್ಷಮಾರ್ಹವೂ, ಚುರುಕು ಎಂಬಂತೆಯೂ ಕಾಣುವುದುಂಟು. ಈ ಅಲಂಕಾರಗಳು ಆಗಾಗ ಶಿಕ್ಷೆಗೊಳಗಾದರೂ ಮತ್ತಷ್ಟು ಶುದ್ಧತೆಯ ಹೊಳಪು ಪಡೆಯುತ್ತವೆ. ಬಾಲ್ಯ ಕಳೆದಂತೆಲ್ಲ ಈ ಗುಣಗಳು ಕಳೆದುಹೋಗುವುದು ಸಹಜ. ಹಾಗಲ್ಲದೇ ಬೆಳೆದು ನಿಂತಾಗಲೂ ಉಳಿದೇಬಿಟ್ಟರೆ ಅಷ್ಟೇನೂ ಸಹನೀಯ ಅನಿಸುವುದಿಲ್ಲ. ಆದರೆ ಲಕ್ಷ್ಮೀನಾರಾಯಣ ಅಂಥವರಲ್ಲಿ ಮಾತ್ರ ಅವು ಅಪೇಕ್ಷಣೀಯ ಅಪವಾದವಾಗಿ ನಿಂತು ಮತ್ತಷ್ಟು ಪ್ರಖರತೆಯನ್ನು ಪಡೆದು ಒಂದು ವಿಶಿಷ್ಟ ಮೌಲ್ಯವಾಗಿ ರೂಪಾಂತರಗೊಳ್ಳುತ್ತದೆ. ಮನುಷ್ಯ ಮಾತ್ರದವನಿಗೆ ನ್ಯಾಯನಿಷ್ಠ ಜೀವನೋತ್ಸಾಹದ ಒಂದು ಮಾದರಿಯಾಗುತ್ತದೆ. ಈ ಕೃತಿ ನೀಡಿರುವ ಸ್ವಯಂ ಅನಾವರಣ ನನ್ನ ಮಾತಿಗೆ ಸಾಕ್ಷಿ ಎಂದು ತಿಳಿಯುತ್ತೇನೆ' ಎಂದಿದ್ದಾರೆ. 

ಜೊತೆಗೆ 'ವಿಶೇಷ ಪ್ರತಿಭಾಶಕ್ತಿ ಇಲ್ಲದಿದ್ದಲ್ಲಿ ಇಂಥ ರಚನೆ ಸಾಧ್ಯವಿಲ್ಲ. ಇಲ್ಲಿನ ಭಾವುಕ ಕ್ಷಣಗಳು ಆರ್ದ್ರಗೊಳಿಸುತ್ತವೆ. ಕೌಟುಂಬಿಕ ಮತ್ತು ಸಾಮಾಜಿಕ ಬಾಂಧವ್ಯಗಳ ಸಾವಯವ ಸಮಗ್ರೀಕರಣವನ್ನು ತಮ್ಮ ಅಮ್ಮ ಮತ್ತು ಇತರ 'ಅಮ್ಮಂದಿರ' ಮೂಲಕ ಕಂಡರಿಸಿದ್ದಾರೆ. ಗೆಳೆಯರ, ಗುರುವೃಂದದ ಗುಣ, ಸ್ವಭಾವ, ಸ್ವರೂಪಗಳನ್ನು ಹಿಡಿದಿಡುವ ಕೌಶಲ, ವೈಚಾರಿಕ ಮತ್ತು ರೈತಚಳವಳಿಯ ಧೀರಗಳಿಗೆಗಳ ದಾಖಲೆ ಇಲ್ಲಿದೆ. ವ್ಯಕ್ತಿಗಳಿಗೆ ಇರುವಂತೆಯೇ ನಗರಗಳಿಗೂ, ಕೆಲವು ಜಾಗಗಳಿಗೂ 'ವ್ಯಕ್ತಿತ್ವ'ವಿರುತ್ತದೆ ಎನ್ನುವ ಮಾತಿದೆ. ಲೇಖಕರು ಇಲ್ಲಿ ಹಾಸನ ಮತ್ತು ಹಾಸನದ ಬೆಂಗಳೂರಿನ ವಿಸ್ತರಣೆಯೇ ಆದ ಕೆಂಚಾಂಬಾ ಲಾಡ್ಜ್, ಜಿಕೆವಿಕೆ ಕ್ಯಾಂಪಸ್ _ ಇವುಗಳ 'ವ್ಯಕ್ತಿತ್ವ'ವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ' ಎಂದು ಅಗ್ರಹಾರ ಕೃಷ್ಣಮೂರ್ತಿ ಮೆಚ್ಚುಗೆ ಸೂಚಿಸಿದ್ದಾರೆ. 

ಈ ಬರವಣಿಗೆ ನನ್ನನ್ನು ಸೆಳೆದದ್ದು ಇಲ್ಲಿಯ ಭಾಷಾ ಪ್ರಯೋಗದಿಂದಾಗಿ. ಅತ್ಯಂತ ವಿಶಿಷ್ಟರೀತಿಯಲ್ಲಿ ನಮ್ಮನುಡಿಯನ್ನು ಬಳಸಿರುವ ಇವರನ್ನು 'ಶ್ಲೇಷಶಾಸ್ತ್ರೀ' ಎಂದು ಕರೆಯಬೇಕೆನಿಸುತ್ತದೆ!  ತಮ್ಮ 65 ವರ್ಷಗಳ ಜೀವನವನ್ನು ನಿರೂಪಿಸುವ ಹೊತ್ತಿನಲ್ಲಿ ಸಮಕಾಲೀನ ಆಗುಹೋಗುಗಳ ಅಪಾಯಸಾಗರವನ್ನು ತಮ್ಮ ಶ್ಲೇಷಾಕ್ಷರ ಬಿಂದುಗಳಲ್ಲಿ ದರ್ಶನಗೊಳಿಸುತ್ತಾರೆ. ಇದನ್ನೂ ಕಾಣುವ ಕಣ್ಣುಗಳು ಇವರ ಓದುಗರಿಗಿರುತ್ತವೆಂಬ ಭರವಸೆ ನನಗಿದೆ ಎಂದು ಶುಭಕೋರಿದ್ದಾರೆ. 

About the Author

ಎಸ್.ಎನ್. ಲಕ್ಷ್ಮೀನಾರಾಯಣ

ಶಾಂತಿಗ್ರಾಮ ನಾರಾಯಣಸ್ವಾಮಿ ಲಕ್ಷ್ಮೀನಾರಾಯಣ (ಎಸ್.ಎನ್. ಲಕ್ಷ್ಮೀನಾರಾಯಣ) ಹುಟ್ಟಿದ್ದು ಹಾಸನದಲ್ಲಿ(1957). ಅವಿಭಜಿತ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್(ಕೃಷಿ) ಪದವಿ (1979] ಮತ್ತು ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೊಮಾ ಗಳಿಸಿರುವ ಅವರು ವೈಶ್ಯ ಬ್ಯಾಂಕ್‌,  ಐಎನ್‌ಜಿ ವೈಶ್ಯ ಬ್ಯಾಂಕಿನಲ್ಲಿ 24 ವರ್ಷಗಳ ಕಾಲ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅವಧಿಗೆ ಮೊದಲೇ ಸೇವೆಯಿಂದ ನಿವೃತ್ತಿ ಪಡೆದು, ಪ್ಲೇಸ್‌ಮೆಂಟ್ ಕನ್ಸಲೆನ್ಸಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕೃಷಿಗೆ ಸಂಬಂಧಿಸಿದ ವೃತ್ತಿಪರ ಸಲಹಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪದವಿ ವ್ಯಾಸಂಗ ಕಾಲದಲ್ಲಿ ಬಾಲ್ ಬ್ಯಾಡ್‌ಮಿಂಟನ್ ಕ್ರೀಡೆಯಲ್ಲಿ ಕೃಷಿ ವಿಶ್ವ ವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯ ತಂಡದ ...

READ MORE

Related Books