ನೆನಪಿನ ನಿಕ್ಷೇಪ

Author : ಎನ್.ಆರ್. ರಮೇಶ್

Pages 401

₹ 450.00
Year of Publication: 2018
Published by: ಧರಣಿ ಪ್ರಕಾಶನ
Address: #108, ಧರಣಿ, 19ನೇ ಕ್ರಾಸ್, 7ನೇ ಮುಖ್ಯರಸ್ತೆ, ಬಿಟಿಎಂ 2ನೇ ಹಂತ, ಬೆಂಗಳೂರು560076
Phone: 9448091150

Synopsys

ಲೇಖಕ ಡಾ. ಎನ್. ಆರ್. ರಮೇಶ ಅವರು ಸ್ವತಃ ಭೂವಿಜ್ಞಾನಿಯಾಗಿದ್ದು, ಭೂ ವಿಜ್ಞಾನಿ ಯೊಬ್ಬರ ಆತ್ಮಕತೆಯಡಿ ತಮ್ಮ ಅನುಭವಗಳನ್ನು ದಾಖಲಿಸಿದ್ದೇ ಈ ಕೃತಿ-’ನೆನಪಿನ ನಿಕ್ಷೇಪ’.

ಭಾರತೀಯ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದ ಲೇಖಕರು, ಭೂಕಂಪನ ಸೇರಿದಂತೆ ಪ್ರಾಕೃತಿಕ ವಿಕೋಪಗಳ ಬಗ್ಗೆ ಅಧ್ಯಯನ ಮಾಡಿದವರು. ಸುಮಾರು 35ಸಾವಿರ ವರ್ಷಗಳ ಹಿಂದೆ ತ್ರಿಪುರ ಸುತ್ತಮುತ್ತ ಶಿಲಾಯುಗದ ಮಾನವನಿದ್ದ ಕುರುಹುಗಳನ್ನು ಮೊದಲ ಬಾರಿಗೆ ಸಂಶೋಧಿಸಿದವರು. ಭೂವಿಜ್ಞಾನ ಹಾಗೂ ಇತಿಹಾಸದ ಸಂಶೋಧನೆ ಎರಡನ್ನೂ ಸಮಾನವಾಗಿ ಕಂಡು, ಅವುಗಳಲ್ಲಿ ಪ್ರಭುತ್ವ ಸಾಧಿಸಿದ್ದು, ಈ ಕುರಿತಂತೆ ತಮ್ಮ ಅನುಭವಗಳನ್ನು ದಾಖಲಿಸಿದ ಕೃತಿ ಇದು. ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಕೃತಿಯ ಮುನ್ನುಡಿಯಲ್ಲಿ ಲೇಖಕರ ಸಂಶೋಧನಾ ದೃಷ್ಟಿಯನ್ನು ಪ್ರಶಂಸಿಸಿದ್ದಾರೆ.

About the Author

ಎನ್.ಆರ್. ರಮೇಶ್

ಡಾ. ಎನ್. ಆರ್. ರಮೇಶ ಅವರು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಭೂವಿಜ್ಞಾನದಲ್ಲಿ ಎಂ.ಎಸ್.ಸಿ. ಪದವಿಯೊಂದಿಗೆ ಚಿನ್ನದ ಪದಕ ಪಡೆದವರು. ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಂತರ ಅದೇ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕರಾಗಿ (2014) ನಿವೃತ್ತಿ ಹೊಂದಿದರು. ಈ ಉನ್ನತ ಹುದ್ದೆಯನ್ನು ಅಲಂಕರಿಸಿದ ಕರ್ನಾಟಕದವರ ಪೈಕಿ ಇವರೇ ಮೊದಲಿಗರು.  ಅನ್ವೇಷಣೆ, ಭೂವಿಜ್ಞಾನವನ್ನು ಸtತ ಅಧ್ಯಯನ ಮಾಡಿ ಚಿನ್ನ ಸೇರಿದಂತೆ ಭಾರತದ ಅನೇಕ ಕಡೆ ಖನಿಜಗಳ ನಿಕ್ಷೇಪಗಳನ್ನು ಪತ್ತೆ ಹಚ್ಚಿದರು. ‘ತ್ರಿಪುರಾದ ಕಲ್ಚರಲ್ ರಿಮೇನ್ಸ್’ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ...

READ MORE

Related Books