ವಿಜ್ಞಾನದೊಳಗೊಂದು ಜೀವನ

Author : ಎಂ.ಎಸ್.ಎಸ್. ಮೂರ್ತಿ

Pages 216

₹ 275.00
Year of Publication: 2023
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

'ವಿಜ್ಞಾನದೊಳಗೊಂದು ಜೀವನ'ದಲ್ಲಿ ಪ್ರೊ. ಸಿ. ಎನ್. ಆರ್. ರಾವ್ ಅವರ ಆತ್ಮಕಥನ. ಇಲ್ಲಿ ಅವರು ಒಬ್ಬ ಮಹಾನ್ ವಿಜ್ಞಾನಿಯಾಗಲು ಯಾವ ರೀತಿ ಕ್ರಿಯಾಶೀಲರಾಗಬೇಕೆಂಬುದರ ಬಗ್ಗೆ ವಿವರಿಸುತ್ತಾರೆ. ಒಬ್ಬ ಶ್ರೇಷ್ಠ ವಿಜ್ಞಾನಿಯಾಗಬೇಕೆಂಬ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಅವರ ಪ್ರಯತ್ನದ ಆರಂಭದ ವರ್ಷಗಳು ಹಾಗೂ ಆಗ ಎದುರಿಸಬೇಕಾಗಿದ್ದ ಅಡೆತಡೆಗಳನ್ನು ಅವರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಸ್ವಾತಂತ್ರಾನಂತರದ ಭಾರತದ ಅತ್ಯಂತ ಖ್ಯಾತ ಹಾಗೂ ಗೌರವಾನ್ವಿತ ವಿಜ್ಞಾನಿಗಳಲ್ಲಿ ಒಬ್ಬರಾದ ಪ್ರೊ. ಸಿ. ಎನ್. ಆರ್. ರಾವ್ ಅವರ ಜೀವನದ ಒಂದು ಒಳನೋಟವನ್ನು ಈ ಪುಸ್ತಕ ನೀಡುತ್ತದೆ. ಅದರಲ್ಲಿ ಅವರು ತಮಗೆ ಸ್ಪೂರ್ತಿದಾಯಕರಾದ ಇಂದಿನ ಹಾಗೂ ಹಿಂದಿನ ವಿಜ್ಞಾನಿಗಳು ಮತ್ತು ವಿಜ್ಞಾನಕ್ಷೇತ್ರದಲ್ಲಿ ಯಶಸ್ವಿಯಾಗಲು ಅವಶ್ಯವಾದ ಸಂವಹನ ಕೌಶಲ್ಯ ಇವುಗಳ ಬಗ್ಗೆಯೂ ಹೇಳುತ್ತಾರೆ. ವಿಜ್ಞಾನವನ್ನೇ ಜೀವನದ ವೃತ್ತಿಯಾಗಿ ಮಾಡಿಕೊಳ್ಳಬಯಸುವ ಯುವಜನಾಂಗಕ್ಕೆ ಆ ಮಾರ್ಗದಲ್ಲಿ ಬರಬಹುದಾದ ಎಡರು-ತೊಡರುಗಳನ್ನು ಯಾವ ರೀತಿ ನಿಭಾಯಿಸಿಕೊಂಡು ಮುಂದುವರಿಯಬೇಕೆಂಬುದರ ಬಗ್ಗೆ ಅಮೂಲ್ಯ ಸಲಹೆಗಳನ್ನೂ ಅವರು ಈ ಪುಸ್ತಕದಲ್ಲಿ ನೀಡಿದ್ದಾರೆ.

About the Author

ಎಂ.ಎಸ್.ಎಸ್. ಮೂರ್ತಿ
(16 August 1929 - 18 December 2012)

ವಿಜ್ಞಾನಿ ಎಂ.ಎಸ್.ಎಸ್. ಮೂರ್ತಿ ಅವರು 16-08-1929ರಂದು ಜನಿಸಿದ ಲೇಖಕರು ಸಹ.ಮುಂಬೈಯ ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ  40 ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತರು. ರೇಡಿಯೇಶನ್ ಬಯೋಫಿಜಿಕ್ಸ್ ನಲ್ಲಿ ಪಿಎಚ್.ಡಿ ಮಾಡಿದ್ದಾರೆ. ಕ್ಯಾನ್ಸರ್‍ ಸೇರಿದಂತೆ ಇತರೆ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುವ ವಿಕಿರಣಗಳು ಹಾಗೂ ಅನುಸರಿಬೇಕಾದ ಸುರಕ್ಷತಾ ನೀತಿಗಳ ಅಧ್ಯಯನ ಇವರ ವಿಶೇಷತೆ. ಸದ್ಯ, ಬೆಂಗಳೂರಿನಲ್ಲಿ ನೆಲೆಸಿದ್ದು, ವೈಜ್ಞಾನಿಕ ವಿಷಯವಾಗಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕ್ಯಾನ್ಸರ್, ಖಗೋಳ ವಿಜ್ಞಾನ, ಮಲೇರಿಯಾ, ಪರಮಾಣು, ತಳಿ ವಿಜ್ಞಾನ, ಕಾಲರಾ ವಿಷಯಗಳು ಕುರಿತದ್ದಾಗಿವೆ.  ಕೃತಿಗಳು: ಆರೋಗ್ಯದ ಅಂಗಳದಲ್ಲಿ ವೈಜ್ಞಾನಿಕ ಪ್ರಗತಿ (ವೈದ್ಯಕೀಯ ಲೇಖನಗಳ ...

READ MORE

Related Books