ನನ್ನ ಜೀವನದ ಸ್ಮೃತಿಗಳು (ಪೂರ್ವರಂಗ)

Author : ಆಲೂರು ವೆಂಕಟರಾಯ

Pages 174

₹ 0.00
Year of Publication: 1940
Published by: ಬೆಳಗಾವಿ ರಾಮಚಂದ್ರರಾಯ
Address: ಜಯ ಕರ್ನಾಟಕ ಕಚೇರಿ, ಧಾರವಾಡ.

Synopsys

ಆಲೂರು ವೆಂಕಟರಾಯರಿಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪ್ರಕಾಶಿಸಿದ ಕೃತಿ-ನನ್ನ ಜೀವನದ ಸ್ಮೃತಿಗಳು. ಈ ಪುಸ್ತಕವು ಒಂದರ್ಥದಲ್ಲಿ ಆಲೂರು ವೆಂಕಟರಾಯರ ಆತ್ಮಕಥೆಯೇ ಆಗಿದೆ. ಕೃತಿಯಲ್ಲಿ ನನ್ನ ನುಡಿಗಳಿಗೆ ನನ್ನದೇ ಮುನ್ನ ನುಡಿ, ನನ್ನ ಸಂಸಾರಿಕ ಜೀವನದ ರೂಪುರೇಷೆ, ನನ್ನ ಬಾಲ್ಯ (1880-1897) , ನನ್ನ ಪ್ರೌಢ ವಿದ್ಯಾರ್ಥಿ ದೆಸೆ, ನನ್ನ ಹಿಂದಿನ ಜೀವನದ ಹಿನ್ನೋಟ, ನನ್ನ ಜೀವನ ಪ್ರವಾಹವು ಉತ್ತರವಾಹಿನಿಯಾಯಿತು, ನನ್ನ ಜೀವನದಲ್ಲಿಯ ಕ್ರಾಂತಿ ಕಾಲ, ನನ್ನ ಜೀವನದ ಧ್ಯೇಯ ಧೋರಣೆಗಳು ನಿಶ್ಚಿತವಾದವು...ಹೀಗೆ ಒಟ್ಟು 8 ಅಧ್ಯಾಯಗಳಡಿ ಅತ್ಯಂತ ಪ್ರೌಢಾವಸ್ಥೆಯ ವಿಚಾರಗಳನ್ನು ಒಳಗೊಂಡ ಲೇಖನ ರೂಪದ ಚಿಂತನೆಗಳು ಪ್ರತಿ ಅಧ್ಯಾಯದಲ್ಲಿ ಸೇರಿವೆ. ಈ ಚಿಂತನೆಗಳು ಮಾನವಾಸಕ್ತಿಯ, ಜೀವನ ಉದ್ದೇಶದ ಸಾಧನಗಳಾಗಿ, ಅದಕ್ಕೆ ಬೇಕಿರುವ ಮನೋಸ್ಥೈರ್ಯದ ಆಧಾರವಾಗಿಯೂ ನಮ್ಮ ಬದುಕಿನ ಉದ್ದೆಶಗಳಿಗೂ ಸೂಕ್ತ ಆಕಾರ ನೀಡುತ್ತವೆ.

 

About the Author

ಆಲೂರು ವೆಂಕಟರಾಯ
(12 July 1880 - 25 February 1964)

‘ಕರ್ನಾಟಕದ ಕುಲಪುರೋಹಿತ’ ಎನಿಸಿದ ಆಲೂರು ವೆಂಕಟರಾಯರು ಕನ್ನಡ -ಕರ್ನಾಟಕ ಕಟ್ಟುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿದವರು. ಧಾರವಾಡದಲ್ಲಿ 1880ರ ಜುಲೈ 12ರಂದು ಜನಿಸಿದ ವೆಂಕಟರಾಯರ ತಂದೆ ಭೀಮರಾಯ, ತಾಯಿ ಭಾಗೀರಥಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. (1903, ಎಲ್ಎಲ್ ಬಿ (1905) ಪದವಿ ಪಡೆದರು. ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದ ಆಲೂರು ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವುದಕ್ಕಾಗಿ ವಕೀಲಿವೃತ್ತಿ ಕೈ ಬಿಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸೂತ್ರಧಾರರಲ್ಲಿ ಒಬ್ಬರಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರ ...

READ MORE

Related Books