ಚಾಂಡಾಳನೊಬ್ಬನ ಆತ್ಮ ವಿಮರ್ಶೆ

Author : ಎಚ್.ಎಸ್. ನಾಗಭೂಷಣ

Pages 172

₹ 325.00
Year of Publication: 2022
Published by: ಸೃಷ್ಟಿ ಪಬ್ಲಿಕೇಷನ್ಸ್

Synopsys

ಈ ಕೃತಿಯು ಸೈದ್ಧಾಂತಿಕವಲ್ಲ, ಆದರೆ ಹಿರಿದಾದ ಅರ್ಥದಲ್ಲಿ The personal is the political ಎನ್ನುವ ಮಾದರಿಯ ರಾಜಕೀಯ ಕೃತಿಯಾಗಿದೆ. ಒಂದು ಕಡೆ ವ್ಯಾಪಾರಿ ಎನ್ನುವ ಈ ವ್ಯಕ್ತಿಯ ಬದುಕುವ ಛಲ, ಪ್ರತಿಭೆ, ಪ್ರತಿರೋಧ ಇವುಗಳ ಪ್ರಭಾವಿ ಕಥನವಾಗಿದ್ದರೆ ಇನ್ನೊಂದೆಡೆ ಆಧುನಿಕ ಭಾರತದ, ಸಮಾಜದ ಅನಾರೋಗ್ಯ ಕ್ರೌರ್ಯಗಳ ಅನಾವರಣವೂ ಆಗಿದೆ. ದಲಿತ ಬರಹಗಳಲ್ಲಿ ಬಹುಮುಖ್ಯವಾದುದು Testimonial ಅಂದರೆ ವೈಯಕ್ತಿಕ ಅನುಭವ ಹಾಗೂ ಚಿಂತನೆಗಳ ನಿರೂಪಣೆ, ಈ ಆತ್ಮಕಥೆಯಲ್ಲಿ ದಲಿತ ಎಂದು ಪ್ರತ್ಯೇಕವಾಗಿ ಗುರುತಿಸುವ ಅಂಶಗಳು ಪ್ರಧಾನವಲ್ಲ. ಏಕೆಂದರೆ ಬ್ಯಾಪಾರಿ ಆಧುನಿಕ ಭಾರತದ ಪ್ರಜೆ. ಇಲ್ಲಿಯ ರಾಜಕೀಯದಲ್ಲಿ ಕ್ರಿಯಾಶೀಲರು, ಜೊತೆಗೆ ಅವರು ದಲಿತರೂ ಹೌದು, ಅವರ ಅನುಭವ ಜಾತಿಕೇಂದ್ರಿತವಲ್ಲದ ಸಮಕಾಲೀನ ದಂದುಗಳನ್ನು ಒಳಗೊಂಡಿದೆ. ನಾಗಭೂಷಣರ ಅನುವಾದದ ಸಾಧನೆ ಇರುವುದು ಈ ಶೈಲಿಯನ್ನು ಸಮರ್ಥವಾಗಿ ಬಳಸಿಕೊಂಡಿರುವುದರಲ್ಲಿ, ಹೇಳುತ್ತಿರುವ ಘಟನೆಗಳು ಅತಿವಾಸ್ತವಿಕ ಎನಿಸುವಾಗಲೂ ಭಾಷೆ ತನ್ನ ವಸ್ತು ನಿಷ್ಠತೆಗೆ ಅಂಟಿಕೊಂಡ ಭಾಷಡಂಬರವನ್ನು ದೂರವಿಡುತ್ತದೆ ಎಂದು ರಾಜೇಂದ್ರ ಚೆನ್ನಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಎಚ್.ಎಸ್. ನಾಗಭೂಷಣ

ಡಾ. ಎಚ್.ಎಸ್. ನಾಗಭೂಷಣ ಅವರು ಶಿವಮೊಗ್ಗದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರೆ. ’ಎಲ್ಲೆ ಮೀರಿ’ ಪುಸ್ತಕ ಅಲ್ಲದೆ ಅವರು ಸಮಕಾಲೀನ ತಮಿಳು ಲೇಖಕ ಬಾಮಾ ಕುರಿತು ಪುಸ್ತಕ ಪ್ರಕಟಿಸಿದ್ದಾರೆ. ಪದವಿ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ರಂಗ ಚಟುವಟಿಕೆಗಳಲ್ಲಿಯೂ ಆಸಕ್ತರಾಗಿರುವ ನಾಗಭೂಷಣ ಅವರು ಹಲವು ಕನ್ನಡ ಮತ್ತು ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದಾರೆ ಮತ್ತು ನಿರ್ದೇಶನ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಆಸಕ್ತಿ ಮೂಡಿಸುವುದಕ್ಕಾಗಿ ಹಲವು ನಾಟಕ ನಿರ್ದೇಶನ ಮಾಡಿದ್ದಾರೆ. ಪ್ರತಿಷ್ಠಿತ ಶಿವಮೊಗ್ಗದ ಕರ್ನಾಟಕ ಸಂಘದ ಗೌರವ ...

READ MORE

Reviews

https://vistaranews.com/columns/sunday-read-new-kannada-book-extract-autobiography-of-a-dalit-by-manoranjan-byapari/259363.html

Related Books