ನೀರ ಮೇಲಣ ಗುಳ್ಳೆ

Author : ಜಿ.ಎಸ್. ಆಮೂರ

Pages 256

₹ 190.00
Year of Publication: 2015
Published by: ವಸಂತ ಪ್ರಕಾಶನ
Address: ನಂ. 360, 10ನೇ ಬಿ ಮುಖ್ಯರಸ್ತೆ, 3ನೇ ಮಹಡಿ, ಜಯನಗರ, ಬೆಂಗಳೂರು- 560011
Phone: 08022443996

Synopsys

‘ನೀರ ಮೇಲಣ ಗುಳ್ಳೆ’ ನಾನು ನನ್ನ ಬದುಕು- ಹಿರಿಯ ಸಾಹಿತಿ ಜಿ.ಎಸ್. ಆಮೂರ ಅವರ ಆತ್ಮಕತೆ. ಲೇಖಕರ ಪ್ರಕಾರ ಆತ್ಮಕತೆಯು ಅವರ ಋಣಸಂದಾಯದ ಒಂದು ಕಾರ್ಯವಿಧಾನ. ಈ ಇಡೀ ಕಥನದ ಮೂಲಕ ಮೂಡಿಬರುವ ಆಮೂರರ ಚಿತ್ರ ಅನನ್ಯವಾದದ್ದು. ಕುಟುಂಬ ವತ್ಸಲ ಪತಿ-ತಂದೆಯಾಗಿ, ಆತ್ಮೀಯ ಗೆಳೆಯನಾಗಿ, ಅಧ್ಯಯನಶೀಲ ವಿದ್ವತ್ಪೂರ್ಣ ವಿದ್ಯಾರ್ಥಿಪ್ರಿಯ ಶಿಕ್ಷಕನಾಗಿ ಮತ್ತು ಕನ್ನಡ ಸಾಹಿತ್ಯಲೋಕ ಕಂಡ ಶ್ರೇಷ್ಠ ವಿದ್ವಾಂಸ- ವಿಮರ್ಶಕನಾಗಿ. ಆಮೂರರ ಈ ಲೋಕಯಾತ್ರೆಯಲ್ಲಿ ಕಾವ್ಯದ ಮಾಧುರ್ಯವಿದೆ. ಕಾದಂಬರಿಯ ವಿಸ್ತಾರತೆ ಇದೆ. ಪ್ರಬಂಧದ ಲಾಲಿತ್ಯವಿದೆ. ನಾಟಕದ ಲವಲವಿಕೆಯೂ ಇದೆ. ತತ್ತ್ವಜ್ಞಾನದ ಗಹನತೆಯೂ ಇದೆ. ಹೀಗೆ ಹಲವು ಬಗೆಯ ಅನುಭವಗಳನ್ನು ಒಟ್ಟಿಗೆ ನೀಡಿರುವ ಕೃತಿ ಇದು.

About the Author

ಜಿ.ಎಸ್. ಆಮೂರ
(08 May 1925 - 28 September 2020)

ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...

READ MORE

Related Books