ಈ ಕೃತಿಯಲ್ಲಿ ಪ್ರಮುಖವಾಗಿ ಎರಡು ಜಗತ್ತುಗಳಿವೆ. ಒಂದು ಬಾಲ್ಯದ ಕೋಟಜಗತ್ತು. ಅದು ಅವರ ವ್ಯಕ್ತಿತ್ವವನ್ನು ರೂಪಿಸಿದ್ದು, ಎಳೆಯ ಮನಸ್ಸು ತನ್ನ ಸುತ್ತಮುತ್ತಲಿನ ಪರಿಸರಕ್ಕೆ ಸ್ಪಂದಿಸುತ್ತಲೇ ತನ್ನ ಗುರಿ ದಾರಿಗಳನ್ನು ಗುರ್ತಿಸಿಕೊಳ್ಳಲು ಇದು ನೆರವು ನೀಡಿದೆ. ಹುಡುಗ ನಾಗಪ್ಪಯ್ಯನ ಮನಸ್ಸನ್ನು ಆವರಿಸಿದ ಕೆಲವು ವ್ಯಕ್ತಿಗಳ ಪ್ರಸಂಗಗಳು ಇಲ್ಲಿ ಚಿತ್ರಿತವಾಗಿದೆ. ಚಿಕ್ಕಂದಿನಲ್ಲಿ ಎದುರಿಸಿದ ಬಿಕ್ಕಟ್ಟಿನ ಘಟನೆಗಳು ಇಲ್ಲಿ ಹಗುರಹೃದಯದ ಅಭಿವ್ಯಕ್ತಿಯಾಗಿ ರೂಪು ಪಡೆದಿವೆ. ಮತ್ತೊಂದು ಅವರ ವೃತ್ತಿಬದುಕನ್ನು ರೂಪಿಸಿದ ಅಮೆರಿಕ ಜಗತ್ತು. ಕರಾವಳಿಯ ಹುಡುಗನೊಬ್ಬ ಕಡಲು ದಾಟಿ ಅಪರಿಚಿತ ಖಂಡ ಪ್ರವೇಶಿಸಿ ತನ್ನ ಬದುಕನ್ನು ಕಟ್ಟಿಕೊಂಡ ರೋಮಾಂಚಕ ಅನುಭವಗಳಲ್ಲಿ ಕೆಲವು ಇಲ್ಲಿವೆ.
©2023 Book Brahma Private Limited.