ಬಿಚ್ಚಿದ ಜೋಳಿಗೆ

Author : ಎಸ್.ಜೆ. ನಾಗಲೋಟಿಮಠ

Pages 336

₹ 225.00
Year of Publication: 2013
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 0836-2367676

Synopsys

ಡಾ. ಸ.ಜ. ನಾಗಲೋಟಿ ಮಠ ಅವರು ಬರೆದ ಆತ್ಮಕಥನ ಕೃತಿ-ಬಿಚ್ಚಿದ ಜೋಳಿಗೆ. ಬಡತನವು ಜಗತ್ತಿನ ಅತಿ ಶ್ರೇಷ್ಠ ವಿಶ್ವ್ವವಿದ್ಯಾಲಯ ಎಂಬ ಪ್ರಧಾನ ಅಂಶ ಇಲ್ಲಿ ವ್ಯಕ್ತವಾಗುತ್ತದೆ. ಡಾ..ಸ.ಜ.ನಾ {ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ} ತಮ್ಮ ಬಾಲ್ಯ, ಯೌವನ ಮತ್ತು ಕಾಲೇಜು ದಿನಗಳ ವಿವರಣೆ ನೀಡಿದ್ದಾರೆ. ತಂದೆಯ ಮರಣದ ಬದುಕು ತುಂಬಾ ದಯನೀಯವಾಗಿತ್ತು. ಅವಮರ್ಯಾದೆಗಳು ಮುತ್ತಿದ್ದವು.  ವರ್ಷಕ್ಕೆ 2 ಜೊತೆ ಬಟ್ಟೆ ಮಾತ್ರ, ಇಂತಹ ಅಸಹನೀಯ ಬದುಕಿನ ಮಧ್ಯೆ ವೈದ್ಯಕೀಯ ಪದವಿ ಪೂರ್ಣಗೊಳಿಸಿದ ಸಾಹಸ, ತದನಂತರದ ಬದುಕನ್ನು ಸಹ ಮಾನವೀಯತೆಯೊಂದಿಗೆ ಕಳೆದಿದ್ದು, ಅಸಾಮಾನ್ಯತೆಯ ಬದುಕಿನ ಚಿತ್ರಣ ನೀಡುತ್ತದೆ. ಲೇಖಕರ ಬಗ್ಗೆ ಅಭಿಮಾನ ಮೂಡುತ್ತದೆ. ಸಿಹಿ-ಕಹಿ, ಸಿರಿತನ-ಬಡತನ, ನೋವು-ನಲಿವುಗಳನ್ನು ಸಾಮಾನ್ಯ ಬರಹದ ಮೂಲಕ ಮನಮುಟ್ಟುವಂತೆ ವಿವರಿಸಿದ್ದಾರೆ.  ಕೆಲಸ ಸಣ್ಣದೋ-ದೊಡ್ಡದೋ, ಮೊದಲು ಅದರಲ್ಲಿ ಪರಿಣಿತಿ ಹೊಂದಬೇಕು. ಸಣ್ಣ ಕೆಲಸ, ನಾನೇಕೆ ಮಾಡಬೇಕು ಎಂಬ ಕೀಳರಿಮೆ ಬಿಡಬೇಕು ಎಂಬುದು ಅವರ ಜೀವನ ಸಂದೇಶ. 

About the Author

ಎಸ್.ಜೆ. ನಾಗಲೋಟಿಮಠ
(20 July 1940 - 24 July 2006)

ವೈದ್ಯಕೀಯ ಹಾಗೂ ವೈಜ್ಞಾನಿಕ ಬರೆಹಗಳಲ್ಲಿ ಡಾ. ಎಸ್.ಜಿ. ನಾಗಲೋಟಿಮಠ ಹೆಸರು ಚಿರಪರಿಚಿತ. ಮೂಲತಃ ಬಾಗಲಕೋಟೆ ಜಿಲ್ಲೆಯವರು. ಇವರು ಜನಿಸಿದ್ದು 1940 ಜುಲೈ 20ರಂದು. ತಂದೆ ಜಂಬಯ್ಯ. ತಾಯಿ ಹಂಪವ್ವ್. ಹುಬ್ಬಳ್ಳಿಯ ಕರ್ನಾಟಕ ವ್ಯದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯ ಪದವೀಧರರು. ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಕಿಮ್ಸ್ ನಿರ್ದೇಶಕರೂ ಹಾಗೂ ಕರ್ನಾಟಕ ವಿಜ್ಞಾನ ಪರಿಷತ್ತು ಮಾಜಿ ಅಧ್ಯಕ್ಷರೂ ಆಗಿದ್ದರು.   ಕೃತಿಗಳು:  ಮಾನವ ದೇಹದ ಮಿಲಿಟರಿ ಪಡೆ, ವೈದ್ಯಕೀಯ ಪ್ರಯೋಗಾಲಯ, ಸರ್ವಜ್ಞ ವಚನಗಳಲ್ಲಿ ಆರೋಗ್ಯ, ಪ್ಲಾಸ್ಟಿಕ್‌ ಸರ್ಜರಿ, ಪರಿಸರ ಮಾಲಿನ್ಯ, ವೈದ್ಯಕೀಯ ವಿಶ್ವಕೋಶ. ಪ್ರಶಸ್ತಿ- ಪುರಸ್ಕಾರಗಳು:  ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...

READ MORE

Related Books