ಸುನೀತಾ ಎಂ. ಶೆಟ್ಟಿ, ಕತೆಗಾರ್ತಿ, ಕವಯತ್ರಿಯಾಗಿ, ಚಿಂತಕಿಯಾಗಿ, ಸಂಘಟಕಿಯಾಗಿ, ಶಿಕ್ಷಕಿಯಾಗಿ ಮುಂಬೈ ಮಾತ್ರವಲ್ಲ ಕರ್ನಾಟಕಾದ್ಯಂತ ಪರಿಚಿತರು. ಇವರು ತಮ್ಮ ಆತ್ಮತತೆಯನ್ನು ಹಲವೆಡೆಗೆ ಹಲವು ರೀತಿಯಲ್ಲಿ ಕೃತಿಗಿಳಿಸಿದ್ದಾರೆ. ಸಾವಿರದ ಬಿಸಿಲು ಬೆಳದಿಂಗಳು ಅವರ ಆತ್ಮಕಥನದ ವಿಸ್ತ್ರತ ರೂಪವಾಗಿದೆ. ಈ ಕಿರು ಕೃತಿ ವಿಶಿಷ್ಟವೆನಿಸುವುದು, ಅವರ ಬಳಸುವ ಸರಳ ಭಾಷೆಯ ಮೂಲಕ. ಹಾಗೆಯೇ ಇದು ಮುಂಬೈಗಿಂತಲೂ ತುಳುನಾಡಿನ 40ರ ದಶಕದ ಕಾಲ ಘಟ್ಟವನ್ನು ಅತ್ಯಂತ ಆತ್ಮೀಯವಾಗಿ ಹಿಡಿದಿಡುತ್ತದೆ. ಬಾಲ್ಯ ಕಾಲ, ತುಳು ಸಂಸ್ಕೃತಿ, ಜಾತ್ರೆ, ದಿಬ್ಬಣ ಇವೆಲ್ಲವನ್ನೂ ಅತ್ಯಂತ ಲವಲವಿಕೆಯಿಂದ ಕಥನ ರೂಪದಲ್ಲಿ ಕಟ್ಟಿಕೊಡುತ್ತಾರೆ. ಸುನೀತಾ ಶೆಟ್ಟಿಯವರ ಬದುಕು ಇನ್ನಷ್ಟು ವಿಸ್ತಾರಗೊಳ್ಳಲು ಕಾರಣವಾದ ಮುಂಬೈಯ ಬಗ್ಗೆಯೂ ಅಪಾರ ಮಾಹಿತಿಗಳನ್ನು ತೆರೆದಿಡುತ್ತಾರೆ. ಈ ಕೃತಿ, ಮುಂಬೈ ಕನ್ನಡದ ಕುರಿತಂತೆ ಅಧ್ಯಯನ ಮಾಡುವವರಿಗೂ ಒಂದು ಕೈಪಿಡಿಯಾಗಿದೆ. ಮಹಿಳಾ ಸಂವೇದನೆಯನ್ನು ಬದುಕಿನ ಉಸಿರಾಗಿಸಿಕೊಂಡು, ಆ ಮೂಲಕ ಕರ್ನಾಟಕದಲ್ಲೂ, ಮುಂಬೈಯಲ್ಲೂ ಸೃಜನಶೀಲತೆಗೆ ತನ್ನದೇ ಆದ ಮಾರ್ಗವನ್ನು ಕಂಡುಕೊಂಡ ಪರಿಯನ್ನು ನಾವು ಈ ಕೃತಿಯಲ್ಲಿ ಕಾಣಬಹುದು.
©2025 Book Brahma Private Limited.