ಸತ್ಯ ದರ್ಶನ – ಕೆಲವು ನೆನಪುಗಳು ಹಲವು ಅನುಭವಗಳು

Author : ಎನ್‍. ಸತ್ಯಪ್ರಕಾಶ್

Pages 311




Year of Publication: 2013
Published by: ಜ್ಞಾನದೀಪಿಕ ಎಜುಕೇಶನಲ್‍ ಟ್ರಸ್ಟ್ (ರಿ)
Address: ನಂ. 43, ‘ಸಂಸ್ಕೃತಿ’, 3ನೇ ಅಡ್ಡ ರಸ್ತೆ, ಕುರುಬರಹಳ್ಳಿ, ಬೆಂಗಳೂರು – 560086
Phone: 9986365393

Synopsys

ಈ ಪುಸ್ತಕವು ಎನ್‍. ಸತ್ಯಪ್ರಕಾಶ್‍ ಅವರ ಜೀವನ ಯಶೋಗಾಥೆ. ತಮ್ಮ ಜೀವನದ ಏಳು ಬೀಳುಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಿದ್ಧಪಡಿಸಿದ್ದಾರೆ. ಈ ಕೃತಿಗೆ ಬೆಲೆಯನ್ನು ನಿಗದಿ ಪಡಿಸಿಲ್ಲ. ಕೃತಿಕೊಳ್ಳುವವರು ತಮ್ಮ ಕೈಲಾದಷ್ಟು ಹಣವನ್ನು ಪಾವತಿಸಬಹುದು. ಎನ್. ಸತ್ಯ ಪ್ರಕಾಶ್ ಅವರ ಚರಿತ್ರೆ ಮುಂದಿನ ಪೀಳಿಗೆಗೆ ಪ್ರಚೋದಕವಾಗಿರಬಹುದು ಅಥವಾ ಮಾದರಿಯಾಗಿರಲೂಬಹುದು. ಸಾಮಾನ್ಯವಾಗಿ ಜೀವನ ಚರಿತ್ರೆಯನ್ನು ದಾಖಲಿಸುವ ಸಂಧರ್ಭದಲ್ಲಿ ಸುಳ್ಳುಗಳು ಸುಳಿದಾಡುವ ಸಾಧ್ಯತೆಗಳು ಹೆಚ್ಚು. ಆದರೆ ಈ ಪುಸ್ತಕದಲ್ಲಿ ತಾವು ಮಾಡಿದ ತಪ್ಪುಗಳನ್ನು ಸವಿವರವಾಗಿ ದಾಖಲಿಸಿದ್ದಾರೆ ಎನ್‍ ಸತ್ಯಪ್ರಕಾಶ್‍. ಈ ಪುಸ್ತಕದಲ್ಲಿ ಕೇವಲ ಎನ್‍ ಸತ್ಯಪ್ರಕಾಶ್ ಅವರ ಜೀವನ ಚರಿತ್ರೆ ಮಾತ್ರವಲ್ಲದೇ, ಅವರ ಪ್ರೀತಿಯ ಶಿ್ಷ್ಯಂದಿರು ಬರೆದಂತಹ ಕೆಲವು ಲೇಖನಗಳು ಮನ ಸೆಳೆಯುತ್ತವೆ. ಶಿಕ್ಷಕ ವೃತ್ತಿಯಿಂದ ವಿರಾಮ ಪಡೆದುಕೊಳ್ಳುವ ಸಮಯದಲ್ಲಿ ತಮ್ಮ ಜೀವನಾನುಭವ ದಾಖಲಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಪ್ರಮಾಣಿಕವಾಗಿ ಬರೆದಿರುವಂತಹ ಈ ಪುಸ್ತಕದಲ್ಲಿ ಬರುವ ಪ್ರತಿಯೊಂದು ಅಂಶವು ಪ್ರತಿಯೊಬ್ಬ ಶಿಕ್ಷಕರಿಗೂ ಮಾರ್ಗದರ್ಶಿ. ತಮ್ಮ ಜೀವನದ ಜೊತೆಗೆ, ತಮ್ಮ ಜೀವನವನ್ನು ರೂಪುಗೊಳಿಸಿದ ಶಿಕ್ಷಕರ ಬಗ್ಗೆ ಕೂಡ ಬರೆದಿದ್ದಾರೆ ಎನ್‍ ಸತ್ಯಪ್ರಕಾಶ್‍. ಪುಸ್ತಕದ ‘ಗುರುವಂದನೆ’ ಎಂಬ ಅಧ್ಯಾಯದಲ್ಲಿ ಎನ್‍ ಸತ್ಯಪ್ರಕಾಶ್‍ರವರ ಶಿಕ್ಷಣ ವೃತ್ತಿಯ ಬಗ್ಗೆ ಬೆಳಕು ಚೆಲ್ಲುವಂತಹ ಅವರ ವಿದ್ಯಾರ್ಥಿಗಳ ಬರಹಗಳು ಇನ್ನೂ ಮುದ ನೀಡುತ್ತವೆ.

About the Author

ಎನ್‍. ಸತ್ಯಪ್ರಕಾಶ್

"ಜ್ಞಾನದೀಪಿಕ ಎಜುಕೇಶನಲ್ ಟ್ರಸ್ಟ್ (ರಿ) ಇದರ ವ್ಯವಸ್ಥಾಪಕ ಟ್ರಸ್ಟಿಯಾಗಿರುವ ಎನ್‍ ಸತ್ಯಪ್ರಕಾಶ್‍ ಅವರು ಓರ್ವ ಯಶ್ಸಸ್ವಿ ಶಿಕ್ಷಕ. ಶಿಕ್ಷಣ ಕೇಂದ್ರಗಳು ವ್ಯಾಪಾರೀಕರಣಗೊಳ್ಳುತ್ತಿರುವ ಕಾಲದಲ್ಲಿ ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಹಾಗೂ ಜವಾಬ್ದಾರಿಗಳ ಬಗ್ಗೆ ಉತ್ತಮ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿ ಇತರರಿಗೆ ಮಾದರಿಯಾದ ಶಿಕ್ಷಕರಾಗಿದ್ದಾರೆ.  ಶಿಕ್ಷಕರಾಗಿರುವ ಜೊತೆ ಜೊತೆಯೇ, ಇವರು ಓರ್ವ ಉತ್ತಮ ಸಂಪನ್ಮೂಲ ವ್ಯಕ್ತಿ, ಉತ್ತಮ ಬರಹಗಾರ ಕೂಡಾ ಆಗಿದ್ದು ಈ ವರೆಗೆ ಶಿಕ್ಷಣ ಕ್ಷೇತ್ರಕ್ಕೆ ಹಲವು ಪುಸ್ತಕಗಳನ್ನು ಹಾಘೂ ಲೇಖನಗಳನ್ನು ಬರೆದಿರುವ ಇವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಲವು ರಾಷ್ಟ್ರೀಯ ಹಾಗೂ ...

READ MORE

Related Books