ಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆ

Author : ಕೆ. ಸತ್ಯನಾರಾಯಣ

Pages 180

₹ 150.00
Year of Publication: 2016
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಲೇಖಕ ಕೆ ಸತ್ಯನಾರಾಯಣ ಅವರು ಆತ್ಮ ಕಥಾನಕ ರೂಪದಲ್ಲೇ ಬರೆದ ಬರಹಗಳ ಸಂಕಲನ 'ಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆ'. ಇಡೀ ಪುಸ್ತಕದುದ್ದಕ್ಕೂ ಎದ್ದು ಕಾಣುವುದು ಅವರ ಪ್ರಯೋಗಶೀಲತೆ. ಆತ್ಮಕಥೆ, ಜೀವನಚರಿತ್ರೆಯ ತಥಾಕಥಿತ ಕಟ್ಟುಗಳನ್ನು ಮೀರುವ ಈ ಕೃತಿ ಬಗ್ಗೆ ಪ್ರಕಾಶಕ, ಲೇಖಕ ನ. ರವಿಕುಮಾರ ಆಡಿರುವ ಮಾತುಗಳು ಹೀಗಿವೆ: .'ಇದು ಮುಂದಿನ ತಲೆಮಾರಿಗೆ ಬರೆದದ್ದು', 'ಕೃತಿ ತನ್ನಷ್ಟಕ್ಕೆ ತಾನೇ ಹೇಳುತ್ತದೆ' ಎಂದು ಸತ್ಯನಾರಾಯಣರು ಆತ್ಮಚರಿತ್ರೆಯ ಪುಟಗಳು ಎಂದು ಕರೆದಿರುವ ಈ ಬರಹಗಳು ಕೂಡ ರೂಢಿಗತವಾದ ಕ್ರಮ, ವಿವರ, ವಿಶ್ಲೇಷಣೆಯ ಮಾದರಿಗಳನ್ನು ಅನುಕರಿಸದೆ, ಅದರ ಮಿತಿಗಳನ್ನು ದಾಟಿ ಆಶಯಕ್ಕೆ ಬೇಕಾದ ಹೊಸ ಬಗೆಯ ಕ್ರಮವನ್ನು ಕಂಡುಕೊಂಡಿರುವುದು ಗಮನೀಯ' ಎಂದಿದ್ದಾರೆ. 

ಇದು ಕೇವಲ ಅವರ ಆತ್ಮಕಥೆ ಮತ್ತು ಆ ಕಾಲದ ಆತ್ಮಕಥೆಯಾಗದೆ ನಮ್ಮ ಕಾಲದ ಮತ್ತು ನಮ್ಮದೇ ಆತ್ಮಕಥೆಯೂ ಆಗುತ್ತದೆ, ದಿನನಿತ್ಯದ ಬದುಕಿನಲ್ಲಿ ಅನಿವಾರ್ಯವಾಗಿ ಎದುರಾಗಬೇಕಾದ ಮತ್ತು ಎದುರಾದಾಗಲೂ  ಅದನ್ನು ನಿರ್ವಹಿಸುವಲ್ಲಿನ ಅಸಹಾಯಕತೆ, ಒತ್ತಡ, ಗೊಂದಲ, ಸಂಭ್ರಮಗಳು ಸಹಜವಾಗಿ  ಇಲ್ಲಿ ಚಿತ್ರಿಸಲ್ಪಟ್ಟಿವೆ. ಸಹಜವಾಗಿಯೇ ಸತ್ಯನಾರಾಯಣರು ಬರೆದಿರುವುದು ಅವರ ಜೀವಿತದ ಕಾಲುಭಾಗದ ಅವರ ಅನುಭವ ಮತ್ತು ವಿವರಗಳನ್ನು, ಉಳಿದ ಮುಕ್ಕಾಲುಭಾಗ ಆತ್ಮಕಥೆ ರೂಪುಗೊಳ್ಳುವುದು ನಮ್ಮ ಮನಃಪಟಲದಲ್ಲಿ ಎನ್ನಬಹುದು. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books