‘ನಿಲುವುಗನ್ನಡಿಯ ಮುಂದೆ’ ಹಿರಿಯ ಲೇಖಕ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರ ಆತ್ಮಚರಿತ್ರೆ. ಉದ್ದನೆಯ ಕನ್ನಡಿಯ ಮುಂದೆ ನಿಂತು ನನ್ನನ್ನು ನಾನೇ ಅಪಾದಮಸ್ತಕ ಪರಿಶೀಲಿಸಿಕೊಳ್ಳುವ ಪ್ರಯತ್ನ ಈ ಕೃತಿಯಲ್ಲಿದೆ ಎನ್ನುತ್ತಾರೆ ಲೇಖಕರು.
ಬಾಲ್ಯದಲ್ಲಿ ನಾನು ಬೆಳೆದ ಊರಾದ ಶಿವಮೊಗ್ಗೆ ನನ್ನ ಮೇಲೆ, ಆ ಮೂಲಕ ನನ್ನ ಸಾಹಿತ್ಯದ ಮೇಲೆ ಬೀರಿದ ದಟ್ಟ ಪ್ರಭಾವದ ಹಲವು ವಿವರಗಳು ಈ ಪುಸ್ತಕದಲ್ಲಿವೆ ಎಂದು ಲೇಖಕರು ಹೇಳುತ್ತಾರೆ.
ತಾಯಿ ನನ್ನನ್ನು ಬೆಳೆಸಲು ಪಟ್ಟ ಕಷ್ಟ ಊರಿನ ಬದಿಯಲ್ಲಿ ಹರಿಯುವ ತುಂಗಾನದಿ, ಮಳೆಗಾಲದಲ್ಲಿ ಪ್ರವಾಹ ಬಂದಾಗ ಊರಿನೊಳಗೆ ನುಗ್ಗಿ ದಂಡೆ ಬದಿಯ ಕೇರಿಗಳಲ್ಲಿ ನದಿ ನಡೆಸುವ ಚೇಷ್ಟೆ, ದಾಂಧಲೆ ಶಾಲೆಯ ಉಪಾಧ್ಯಾಯರಲ್ಲದೆ ಹೊರಗಿನ ಹಲವರು ಹಿರಿಯರೂ ನನಗೆ ಅಧ್ಯಾಪಕರೆಂಬಂತೆ ಒದಗಿ, ನನ್ನ ಬದುಕನ್ನು ಬದಲಿಸಿದ ಬಗೆ, ಇನ್ನೇನು ನನ್ನ ಓದು ಮುಗಿದೇ ಹೋಯಿತು ಎನಿಸುತ್ತಲೇ ಮುಂದುವರಿದ ರೀತಿ, ಮೈಸೂರಿನಲ್ಲಿ ನಾನು ನಡೆಸಿದ ವಾರಾನ್ನದ ಬದುಕು. ಅಲ್ಲಿಯ ಮಹಾರಾಜ ಕಾಲೇಜಿನಲ್ಲಿ ಪೂರ್ವ ಪುಣ್ಯದಿಂದೆಂಬಂತೆ ದೊರೆತ ತೀನಂಶ್ರೀ, ಡಿ.ಎಲ್.ಎನ್, ತ.ಸು. ಶಾಮರಾಯರಂಥ ಘಟಾನುಘಟಿ ಅಧ್ಯಾಪಕರ ಪಾಠ ಪ್ರವಚನ, ಇವೆಲ್ಲವುಗಳ ವಿವರ ಈ ಕೃತಿಯಲ್ಲಿದೆ. ಜೊತೆಗೆ ಹಲವು ಸಾಹಿತಿಗಳೊಡನೆ ಲೇಖಕರಿಗೆ ಒದಗಿದ ಸಂಪರ್ಕ, ಸುಗಮಸಂಗೀತ ಕ್ಷೇತ್ರದಲ್ಲಿ ಅವರಿಗೆ ದೊರೆತ ಸಂಗೀತ ಸಾಧಕರ ವಿಷಯವೂ ಇಲ್ಲಿದೆ. ಅವರ ಕೃತಿಗಳ ಹಿನ್ನೆಲೆ ಅವುಗಳಿಗೆ ಬಂದ ಪ್ರತಿಕ್ರಿಯೆ. ಅಮೆರಿಕ, ಇಂಗ್ಲೆಂಡಿನ ಪ್ರವಾಸದ ಸಂಕ್ಷಿಪ್ತ ಮಾಹಿತಿಯೂ ಲೇಖಕರು ನೀಡಿದ್ದಾರೆ.
©2023 Book Brahma Private Limited.