ನಾವೇನು ಬಡವರಲ್ಲ

Author : ಕೆ. ಸತ್ಯನಾರಾಯಣ

Pages 152

₹ 100.00
Year of Publication: 2013
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕೆ. ಸತ್ಯನಾರಾಯಣ ಕನ್ನಡದ ಪ್ರಮುಖ ಕಾದಂಬರಿಕಾರ, ಕತೆಗಾರ.ಅವರ ಆತ್ಮಕಥಾನಕ ’ನಾವೇನು ಬಡವರಲ್ಲ’. 

ಮೇಲ್ಮುಖವಾಗಿ ಚಲಿಸಿದ ಜನಾಂಗವೊಂದು ಬಡತನವನ್ನು ನೀಗಿಕೊಂಡರೂ ನಾವು ಬಡವರಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ದವಿರುವುದಿಲ್ಲ. ಅದರಿಂದ ಕಣ್ಣೆದುರಿಗಿನ ನಿಜವಾದ ಬಡವರ ಬಡತನ ಅವರ ಕಣ್ಣಿಗೆ ಕಾಣಿಸುವುದಿಲ್ಲ. ಅಲ್ಲಿಯವರೆಗೆ ಅವರ ಬಡತನವೂ ನೀಗುವುದಿಲ್ಲ - ಎಂಬ ಕಹಿ ಸತ್ಯವನ್ನು ಆತ್ಮ ನಿರೀಕ್ಷಣೆಯ ಮೂಲಕ ಅನನ್ಯವಾಗಿ ಲೇಖಕರು ಮನಗಾಣಿಸಿದ್ದಾರೆ. ಈ ಕೃತಿಯು ಬೀದಿಯಿಂದ ಪ್ರಾರಂಭವಾಗಿ ನಗರಗಳವರೆಗೂ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ. ಹೀಗಾಗಿ ನಗರೀಕರಣಗೊಂಡ ಜನಾಂಗದ ಆತ್ಮಕಥನವೂ ಆಗಿದೆ. ನಿಷ್ಟುರವಾದ ಆತ್ಮಪರೀಕ್ಷೆಗೆ ಒಡ್ಡಿಕೊಂಡಿರುವುದರಿಂದ  ಆತ್ಮಕಥನದಲ್ಲಿ ಅಪರೂಪವಾದ ವಸ್ತುನಿಷ್ಠತೆ ಇದೆ.

ಚಲನಶೀಲವಾದ ಸಮಾಜದಲ್ಲಿ ಆ ಸಮಾಜವನ್ನು ನೋಡುವ, ಅರ್ಥಮಾಡಿಕೊಳ್ಳುವ ವೈಚಾರಿಕ ಚೌಕಟ್ಟುಗಳೂ ಬದಲಾಗಬೇಕಾಗುತ್ತದೆ ಎನ್ನುವ ಲೇಖಕರ ವಿಚಾರ ಪ್ರಶ್ನಾತೀತವಾದುದು. ಹಾಗೆಯೇ ಈ ವೈಚಾರಿಕ ಚೌಕಟ್ಟುಗಳು ಸಮಕಾಲೀನ ಬದುಕಿನ ಬಗ್ಗೆ ಸೂಕ್ತ ಹಾಗೂ ಮುಕ್ತಚಿಂತನೆಯಲ್ಲಿ ಹುಟ್ಟಿಕೊಳ್ಳಬೇಕು ಎನ್ನುವ ಲೇಖಕರ ವಾದವೂ ಗ್ರಾಹ್ಯವಾದುದು. ಸತ್ಯನಾರಾಯಣ ಅವರು ಕತೆ, ಕಾದಂಬರಿ, ಪ್ರಬಂಧ - ಈ ಎಲ್ಲ ಪ್ರಕಾರಗಳಲ್ಲಿಯೂ ಹೊಸ ದಾರಿಗಳನ್ನು ತುಳಿದವರಾಗಿದ್ದು ಈ ಪುಸ್ತಕವೂ ಈ ಮಾತಿಗೆ ಅಪವಾದವಲ್ಲ. 

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books