ಪೂರ್ಣಚಂದ್ರ ತೇಜಸ್ವಿಯವರು ತಮ್ಮ ತಂದೆ ರಾಷ್ಟ್ರಕವಿ ಕುವೆಂಪು ಅವರನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವ ನೆನಪುಗಳು ‘ಅಣ್ಣನ ನೆನಪು’ (1996) ಕೃತಿಯಲ್ಲಿ ಸಂಗ್ರಹಗೊಂಡಿವೆ. ಈ ಬರೆಹಗಳು ಮೊದಲು ’ಲಂಕೇಶ್ ಪತ್ರಿಕೆ’ಯಲ್ಲಿ ಸರಣಿಯಾಗಿ ಪ್ರಕಟಗೊಂಡಿದ್ದವು. ಇದು ಕುವೆಂಪು ಅವರ ಕುರಿತು ತೇಜಸ್ವಿ ರಚಿಸಿದ ಜೀವನ ಚರಿತ್ರೆ ಆಗಿರುವ ಹಾಗೆಯೇ ತೇಜಸ್ವಿಯವರ 'ಆತ್ಮ ಚರಿತ್ರೆ'ಯೂ ಆಗಿದೆ. ಮತ್ತೊಂದು ರೀತಿಯಲ್ಲಿ ನೋಡಿದರೆ ಎಲಿಯಟ್, ನೆಹರೂ, ಲೋಹಿಯಾ, ಕನ್ನಡ ಚಳುವಳಿಗಳು, ಕರ್ನಾಟಕ ಏಕೀಕರಣ, ಎಪ್ಪತ್ತರ ದಶಕದ ಕಲಾವಿದ ಹಾಗು ಬರಹಗಾರರ ಒಕ್ಕೂಟ, ಬೂಸಾ ಪ್ರಕರಣ ಮುಂತಾದ ವ್ಯಕ್ತಿ-ವಿಷಯ, ವಿಚಾರಗಳನ್ನು ಕುರಿತು ಚರ್ಚಿಸುತ್ತದೆ. ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯನ್ನು ಅಧ್ಯಯನ ಮಾಡುವವರಿಗೆ ಇದು ಆಕರ ಕೃತಿ. ಒಟ್ಟು ನಲವತ್ತೊಂದು ಅಧ್ಯಾಯಗಳಿವೆ.
ಅಣ್ಣನ ನೆನಪು (ಅನುಭವ ಕಥನ), ಲೇಖಕರು- ಪೂರ್ಣಚಂದ್ರ ತೇಜಸ್ವಿ, ಸಂಕ್ಷಿಪ್ತ ಪರಿಚಯ - ಪ್ರೊ. ರಾಜಪ್ಪ ದಳವಾಯಿ
©2023 Book Brahma Private Limited.