ಲೇಖಕ ಡಾ. ದ್ವಾರನಕುಂಟೆ ಪಾತಣ್ಣ ಅವರ ಆತ್ಮಕಥನ-ನನ್ನೊಳಗಣ ನಾನು. ತುಮಕೂರು ಜಿಲ್ಲೆಯ ದ್ವಾರನಕುಂಟೆಯವರಾದ ಪಾತಣ್ಣನವರು, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ, ಸ್ವಾಭಿಮಾನಿ ಕರ್ನಾಟಕ ಕ್ಷೇತ್ರದ ರಾಜ್ಯಾಧ್ಯಕ್ಷರಾಗಿ, ಕನ್ನಡ ಸಂಘರ್ಷ ಸಮಿತಿಯ ಉಪಾಧ್ಯಕ್ಷರಾಗಿ, 18 ಕೃತಿಗಳನ್ನು ರಚಿಸಿದ್ದಾರೆ. ಇವರ ಸಾಧನೆಗೆ ಕನ್ನಡ ಸಾಹಿತ್ಯ ಪರಿಷತ್ತನಿಂದ ಶ್ರೀಮತಿ ಪದ್ಮಾವತಮ್ಮ ದತ್ತಿ ಪ್ರಶಸ್ತಿ, ವಿಶ್ವೇಶರಯ್ಯ ಪ್ರಶಸ್ತಿ, ಕುವೆಂಪು ಸಾಹಿತ್ಯ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಅವರು ತಮ್ಮ ಜೀವನಾನುಭವದ ಕಾಣ್ಕೆಗಳನ್ನು ದಾಖಲಿಸಿದ ಕೃತಿ ಇದು.
©2025 Book Brahma Private Limited.