ಬಲುತ ದಲಿತ ಲೇಖಕನ ಆತ್ಮಕಥನ

Author : ಚಂದ್ರಕಾಂತ ಪೋಕಳೆ

Pages 204

₹ 125.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ಬಲುತ’ ಕೃತಿಯು ದಲಿತ ಲೇಖಕನ ಆತ್ಮಕಥನವಾಗಿದೆ. ಕೃತಿಯ ಮೂಲಕ ಲೇಖಕ ದಯಾ ಪವಾರ. ಚಂದ್ರಕಾಂತ ಪೋಕಳೆ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಮರಾಠಿ ಭಾಷೆಯಲ್ಲಿ ಬಂದ ಆತ್ಮಕಥನ, ದಯಾ ಪವಾರರು ಬರೆದುಕೊಂಡಿದ್ದು. ಅವರು ಸಮಾಜದ ಕೆಳಸ್ತರದಿಂದ ಬಂದವರಾದ್ದರಿಂದಲೇ ಇದಕ್ಕೆ ಇಷ್ಟೊಂದು ಮಹತ್ವ ನಮ್ಮ ದೇಶದ ವರ್ಣ ವ್ಯವಸ್ಥೆಯ ಕರಾಳರೂಪವೊಂದು ತನ್ನ ದಟ್ಟ ಛಾಯೆಯನ್ನು ಮೂಡಿಸಿದ ನಂತರದ ದಿನಗಳಲ್ಲಿ ಬರೆಯಲ್ಪಟ್ಟದ್ದು. ದಲಿತ ಸಮುದಾಯ ಅಕ್ಷರ ಕಲಿತು ಸಮಾನತೆಗಾಗಿ ಸವರ್ಣೀಯರ ವಿರುದ್ಧ ಹೋರಾಡಿದ ಕಾಲಘಟ್ಟದಲ್ಲಿನ ಜೀವನ ಚಿತ್ರಣ. ಒಂದು ರೀತಿಯಲ್ಲಿ ತೀರಾ ಇತ್ತೀಚಿನದು. ಹಿಂದೂ ಧರ್ಮದ ಒಂದು ಕಳಂಕವಾದ ಜಾತಿಪದ್ಧತಿ ಮೇರೆ ಮೀರಿದ ಸಮಯದ ಚಿತ್ರಣ, ಸರಕಾರದ ಕೆಲ ಕಠಿಣ ಕಾನೂನುಗಳಿಂದ ವ್ಯವಸ್ಥೆ ಬದಲಾಗಿರಬಹುದು. ಆದರೆ ಮನಸ್ಸುಗಳು ಬದಲಾದಂತಿಲ್ಲ. ಇಂದಿನ ಸಮಾಜ ವ್ಯವಸ್ಥೆ ಬೆಣ್ಣೆಯಲ್ಲಿ ಸೂಜಿ ಚುಚ್ಚುವಂತಹ ಒಂದು ನವಿರಾದ ಕ್ರೌರ್ಯ ತೋರ್ಪಡಿಸುತ್ತಿದೆ ಎನ್ನುತ್ತದೆ ಈ ಕೃತಿ. 

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Reviews

(ಹೊಸತು, ನವೆಂಬರ್ 2013, ಪುಸ್ತಕದ ಪರಿಚಯ)

ಇದು ಮರಾಠಿ ಭಾಷೆಯಲ್ಲಿ ಬಂದ ಆತ್ಮಕಥನ, ದಯಾ ಪವಾರರು ಬರೆದುಕೊಂಡಿದ್ದು. ಅವರು ಸಮಾಜದ ಕೆಳಸ್ತರದಿಂದ ಬಂದವರಾದ್ದರಿಂದಲೇ ಇದಕ್ಕೆ ಇಷ್ಟೊಂದು ಮಹತ್ವ ನಮ್ಮ ದೇಶದ ವರ್ಣ ವ್ಯವಸ್ಥೆಯ ಕರಾಳರೂಪವೊಂದು ತನ್ನ ದಟ್ಟ ಛಾಯೆಯನ್ನು ಮೂಡಿಸಿದ ನಂತರದ ದಿನಗಳಲ್ಲಿ ಬರೆಯಲ್ಪಟ್ಟದ್ದು. ದಲಿತ ಸಮುದಾಯ ಅಕ್ಷರ ಕಲಿತು ಸಮಾನತೆಗಾಗಿ ಸವರ್ಣೀಯರ ವಿರುದ್ಧ ಹೋರಾಡಿದ ಕಾಲಘಟ್ಟದಲ್ಲಿನ ಜೀವನ ಚಿತ್ರಣ. ಒಂದು ರೀತಿಯಲ್ಲಿ ತೀರಾ ಇತ್ತೀಚಿನದು. ಹಿಂದೂ ಧರ್ಮದ ಒಂದು ಕಳಂಕವಾದ ಜಾತಿಪದ್ಧತಿ ಮೇರೆ ಮೀರಿದ ಸಮಯದ ಚಿತ್ರಣ, ಸರಕಾರದ ಕೆಲ ಕಠಿಣ ಕಾನೂನುಗಳಿಂದ ವ್ಯವಸ್ಥೆ ಬದಲಾಗಿರಬಹುದು. ಆದರೆ ಮನಸ್ಸುಗಳು ಬದಲಾದಂತಿಲ್ಲ. ಇಂದಿನ ಸಮಾಜ ವ್ಯವಸ್ಥೆ ಬೆಣ್ಣೆಯಲ್ಲಿ ಸೂಜಿ ಚುಚ್ಚುವಂತಹ ಒಂದು ನವಿರಾದ ಕ್ರೌರ್ಯ ತೋರ್ಪಡಿಸುತ್ತಿದೆ. ಜಾತಿ ವ್ಯವಸ್ಥೆ ಪ್ರಜ್ವಲಿಸದೆ ಬೂದಿ ಮುಚ್ಚಿದ ಕೆಂಡದಂತಿದೆ. ಶೋಷಿತ ವರ್ಗ ಎದ್ದುನಿಂತು ಪ್ರತಿಭಟಿಸಿದಾಗ ಶೋಷಕವರ್ಗ ಅದನ್ನು ದಮನಿಸಲು ಬೇರೆಯೇ ಹುಡುಕತೊಡಗುತ್ತದೆ. ಸಂಘರ್ಷಗಳು ಸಾಂಸ್ಕೃತಿಕ ರಂಗ ಪ್ರವೇಶಿಸಿದರೆ ಅಲ್ಲೂ ದಲಿತ ಲೇಖಕರೆಂಬ ಹಣೆಪಟ್ಟಿ ಆಂಟಿಕೊಳ್ಳುವುದೇಕೆ ? ಜಾತಿ-ಮತ-ಧರ್ಮಗಳ ಹೆಸರಿನಲ್ಲಿ ಆಗುವ ಕ್ರೌರ್ಯಗಳನ್ನು ತೊಡೆದುಹಾಕಬೇಕಾದ ಅಗತ್ಯವನ್ನು ಇಂಥ ಆತ್ಮಕಥನಗಳು ಒತ್ತಿ ಹೇಳುತ್ತಿವೆ.

 

 

Related Books