ಒಂಟಿ ಕಾಲಿನ ನಡಿಗೆ

Author : ಎಲ್. ಹನುಮಂತಯ್ಯ

Pages 284

₹ 200.00




Year of Publication: 2017
Published by: ಚಾರುಮತಿ ಪ್ರಕಾಶನ
Address: # 224, 4ನೇ ಮುಖ್ಯರಸ್ತೆ, ಕಮಲಾನಗರ, ಚಾಮರಾಜಪೇಟೆ, ಬೆಂಗಳೂರು- 560018
Phone: 09448235553

Synopsys

ಲೇಖಕ ಡಾ. ಎಲ್. ಹನುಮಂತಯ್ಯ ಅವರ ಆತ್ಮಕಥನ ಭಾಗ-1-ಒಂಟಿ ಕಾಲಿನ ನಡಿಗೆ. ದಲಿತ ಚಳವಳಿ ಹಾಗೂ ರಾಜಕಾರಣದಲ್ಲಿ ಸಕ್ರಿಯರಾದ ಲೇಖಕರು ಕವಿಗಳೂ ಹೌದು. ತಮ್ಮ ಹೈಸ್ಕೂಲ್ ಶಿಕ್ಷಣ, ಪದವಿ ಶಿಕ್ಷಣದ ಜೊತೆಗೆ ದಲಿತ ಚಳವಳಿಯಲ್ಲಿ ಧುಮುಕಿದ ಬಗೆಯನ್ನು ಚಿತ್ರಿಸಿದ್ದಾರೆ. ವಿವಿಧ ಸ್ಪರ್ಧೆಗಳಲ್ಲಿ ಸಕ್ರಿಯರಾಗಿದ್ದರ ವಿವರಣೆ ಇದೆ. ತಮ್ಮ ಚಿಂತಿಸುವ ಯೋಚನಾಲಹರಿ ವಿಶೇಷತೆಯನ್ನು ಉಲ್ಲೇಖಿಸಿದ್ದಾರೆ. ಸ್ನೇಹಿತರು ಮತ್ತವರ ಕುಟುಂಬಗಳ ಪರಿಚಯ, ಒಂದು ಬ್ರಾಹ್ಮಣ ಕುಟುಂಬಕ್ಕೆ ಹತ್ತಿರದವರಾದ ಬಗ್ನಾಗೆ, ದಲಿತ ಸಮುದಾಯ ಯೋಚಿಸುವ ಅನೇಕ ವಿಚಾರಗಳು ಬ್ರಾಹ್ಮಣರು ಚಿಂತಿಸುವ, ಅವರ ಮನೆಯಲ್ಲಿ ನಡೆದುಕೊಳ್ಳುವ ನಡವಳಿಕೆಗಳಿಗಿಂತ ತುಂಬಾ ವಿಭಿನ್ನವಾಗಿದ್ದವು. ಹೀಗೂ ಇರಲು ಸಾಧ್ಯವೇ ಎಂದು ಯೋಚಿಸುತ್ತಾರೆ. ಪದವಿ ಮುಗಿಸಿ ಬ್ಯಾಂಕ್‌ ಉದ್ಯೋಗಕ್ಕೆ ಸೇರಿದ್ದು, ಬ್ರಾಹ್ಮಣರ ಒಡನಾಟ ಇದ್ದಿದ್ದು, ಕಮ್ಯುನಿಸ್ಟ್‌ ಪಕ್ಷದ ನಾಯಕತ್ವ ಬ್ರಾಹ್ಮಣರ ಕೈಯಲ್ಲಿದ್ದರ ಬಗ್ಗೆ ಚರ್ಚೆ ಇದೆ. ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಮಾತು, ನಡೆ, ಹೋರಾಟಗಳೂ ಚರ್ಚೆಯ ವಿಷಯಗಳಾಗಿದ್ದವು. ಹೀಗೆ ತಾವು ತಮ್ಮ ಬದುಕಿನುದ್ದಕ್ಕೂ ಪಾಲಿಸುತ್ತಾ ಬಂದ ವಿಚಾರ-ಒಡನಾಟಗಳು ತತ್ವ-ಸಿದ್ಧಾಂತಗಳು ತಮ್ಮ ಆತ್ಮಕಥನದ ಬಹುಭಾಗವನ್ನು ಆವರಿಸಿವೆ.

About the Author

ಎಲ್. ಹನುಮಂತಯ್ಯ
(10 June 1955)

ರಾಜ್ಯಸಭಾ ಸದಸ್ಯರಾಗಿರುವ ಎಲ್. ಹನುಮಂತಯ್ಯ ಪ್ರಮುಖ ಕವಿಗಳಲ್ಲಿ ಒಬ್ಬರು. ಬೆಂಗಳೂರು ಜಿಲ್ಲೆ ರಾಮೇಶ್ವರ ಗ್ರಾಮದವರಾದ ಅವರು ಮೊದಲಿಗೆ ಬ್ಯಾಂಕ್ ನೌಕರಿಯಲ್ಲಿದ್ದರು. ಸೃಜನಶೀಲ ಸಾಹಿತಿ, ವಾಗ್ಮಿ ಹಾಗೂ ವಿಮರ್ಶಕ ಆಗಿರುವ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರು. 'ಕಪ್ಪು ಕಣ್ಣಿನ ಹುಡುಗಿ', 'ಅವ್ವ (ಕವಿತಾ ಸಂಕಲನ); 'ಅಂಬೇಡ್ಕರ್ ಕವನಗಳು’ (ಸಂಪಾದನೆ) 'ದಲಿತ ಲೋಕದ ಒಳಗೆ' (ವಿಮರ್ಶೆ), ಅಂಬೇಡ್ಕರ್‌' (ನಾಟಕ) ಪ್ರಕಟಿತ ಕೃತಿಗಳು. ಅವರ ಸಮಗ್ರ ಕೃತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದೆ. ಅವರು ಜನಪರ ಸಂಘಟನೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ...

READ MORE

Related Books