ವೈಫ್ ಆಫ್ ಸೋಲ್ಜರ್

Author : ಎಸ್. ಭಾಗ್ಯ

Pages 88

₹ 80.00




Year of Publication: 2021
Published by: ಕಗ್ಗೆರೆ ಪ್ರಕಾಶನ
Address: # 15/375, ಸ್ನೇಹ ಕಾರಂಜಿ, ಕೆಂಪೇಗೌಡನಗರ, 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಮಾಗಡಿ ಮುಖ್ಯರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು-560091
Phone: 9663412986

Synopsys

ಯೋಧರೊಬ್ಬರ ಮಡದಿಯ ಅನುಭವ ಕಥನ-‘ವೈಫ್ ಆಫ್ ಸೋಲ್ಜರ್’. ಸ್ವತಃ ಲೇಖಕಿ ಎಸ್. ಭಾಗ್ಯ ತಮ್ಮ ಬದುಕಿನ ಅನುಭವವನ್ನು ದಾಖಲಿಸಿದ್ದಾರೆ. ಲೇಖಕಿಯೇ ಹೇಳುವಂತೆ ‘ದೂರದ ಬೆಟ್ಟ ನುಣ್ಣಗೆ’ ಎಂಬಂತೆ ನಮ್ಮಿಂದ ದೂರವಿರುವ ಯೋಧರ ಬದುಕನ್ನು ಹಾಗೂ ಕುಟುಂಬದವರನ್ನು ಹತ್ತಿರದಿಂದ ನೋಡಿದಾಗಷ್ಟೇ ಅವರ ಬದುಕಿನ ಸಿಹಿ-ಕಹಿ ತಿಳಿಯಲು ಸಾಧ್ಯ. ಅಂತಹ ಯೋಧನ ಮಡದಿಯಾಗಿ ನಾನು ಸ್ವಾನುಭವದಿಂದಲೂ, ನನ್ನ ಸ್ನೇಹಿತೆಯರೊಂದಿಗೆ ಒಡನಾಡಿದ ಅನುಭವದಿಂದಲೂ ಈ ಕೃತಿಯ ಮೂಲಕ ಕಣ್ಣರಿಯದ ಹಲವು ತಲ್ಲಣದ ವಿಚಾರಗಳಿಗೆ, ಮನಸಿನ ಮಾತುಗಳಿಗೆ ಅಕ್ಷರ ರೂಪ ನೀಡಿದ್ದೇನೆ’ ಎಂದು ಹೇಳಿದ್ದಾರೆ.

ಕೃತಿಗೆ ಮುನ್ನುಡಿ ಬರೆದ ಹಿರಿಯ ಪತ್ರಕರ್ತ ಬಿ.ಗಣಪತಿ ‘ ಕೃತಿಯು ಎಷ್ಟು ಸಾಫಲ್ಯ ಪಡೆದಿದೆ ಎನ್ನುವ ಪ್ರಶ್ನೆ ಎದುರಾದಾಗ ಇಲ್ಲಿನ ಭಾಷೆ, ಆ ಅಭಿವ್ಯಕ್ತಿಯಲ್ಲಿ ಹರಿದು ಹರಳುಗಟ್ಟಿದ ಪರಿ, ಅನುಭವ ಕೃತಿಯಾಗುವಲ್ಲಿನ ಬಂಧ, ಒಬ್ಬ ಸೈನಿಕನ ಹೆಂಡತಿಯ ಒಡಲ ಆ ಒಂಟಿತನದ ನೆಲೆಯ ಒಟ್ಟೂ ಅಭಿವ್ಯಕ್ತಿಯ ಆರ್ದ್ರತೆ ಇವೆಲ್ಲವನ್ನೂ ದೃಷ್ಟಿಯಲ್ಲಿ ನೋಡಿದರೆ ‘ವೈಫ್ ಆ ಸೋಲ್ಜರ್’ ಮೊದಲ ದರ್ಜೆಯ ಕೃತಿಯಲ್ಲ, ಶ್ರೇಷ್ಠ ಕೃತಿಯಲ್ಲ, ಉದ್ಧಾಮವೂ ಆಗಲಾರದು. ಆದರೆ ಒಬ್ಬ ಸಾಮಾನ್ಯ ಗೃಹಿಣಿ, ಬರವಣಿಗೆಗೆ ತನ್ನ ವೃತ್ತಿ ಬಿಡಿ, ಹವ್ಯಾಸವೂ ಅಲ್ಲದ ದಿಢೀರ್ ಲೇಖಕಿಯೊಬ್ಬಳ ತೊದಲು, ಚೊಚ್ಚಲ ಕೃತಿಯದು ಎಂಬ ಪರಿವೆ, ಪರಿಜ್ಞಾನದಲ್ಲಿ ನೋಡಿದರೆ, ಪರಿಭಾವಿಸಿದರೆ ನಿಜಕ್ಕೂ ಯಾವುದೇ ಕನ್ನಡದ ಮಹತ್ವದ ಲೇಖಕರ ಕೃತಿಗಳಿಗಿಂತ ಈ ಕೃತಿ ನನಗೆ ಮುಖ್ಯವಾಗಿ ಮೇಲ್ಪಟ್ಟದ್ದಾಗಿ ಕಾಣುತ್ತದೆ’ ಎಂದು ಪ್ರಶಂಸಿಸಿದ್ದಾರೆ.    

About the Author

ಎಸ್. ಭಾಗ್ಯ

ಎಸ್ ಭಾಗ್ಯ ಅವರು ಸಿತಾರ ಪತ್ರಿಕೆಯ ಕಛೇರಿ ನಿರ್ವಾಹಕಿಯಾಗಿದ್ದಾರೆ. ಅವರು ಯೋಧನ ಪತ್ನಿಯಾಗಿದ್ದು, ಅವರ ಸ್ವಂತ ಅನುಭವಗಳನ್ನು ದಾಖಲಿಸಿದ ಕೃತಿ-ವೈಫ್ ಆಫ್ ಸೋಲ್ಜರ್ (ಆತ್ಮಕಥನ)  ...

READ MORE

Reviews

‘ವೈಫ್ ಆಫ್ ಸೋಲ್ಜರ್’ ಕೃತಿಯ ವಿಮರ್ಶೆ

ಯೋಧನ ಮಡದಿಯ ಅನುಭವ ಕಥನ 

ಸೈನಿಕನ ಪತ್ನಿಯಾದ ಎಸ್. ಭಾಗ್ಯ ತನ್ನ ಭಾವಬಂಧುರತೆಯ ಎಲ್ಲಾ ಪದರುಗಳನ್ನೂ ನಿರ್ಮಲ ಚಿತ್ರ ನಿರ್ವ್ಯಾಮೋಹ ಚಿತ್ತದಿಂದ ಹೊರಗೆಡಹಿದ್ದಾರೆ. ಗಂಡನಿಲ್ಲದ ನೀರವತೆಯ ಚಿತ್ರಗಳು, ಗಂಡ ಆಗಾಗ ಬರುವ ಸಂಭ್ರಮದ ಚಿತ್ರಗಳು, ಗಂಡನಿಲ್ಲದ ದಿನಗಳಲ್ಲಿ ಅತ್ತೆ-ಮಾವ ಅದರಲ್ಲೂ ಅತ್ತೆ ಎಂಬ ಸ್ವಜಾತೀಯ ಖಳನಾಯಕಿಯ ಬಗ್ಗೆಯೂ ತೆರೆದಿಡುವ ದಿಟ್ಟತನ ಮೆರೆದಿದ್ದಾರೆ. ಒಬ್ಬ ಸೈನಿಕನ ಹೆಂಡತಿ ಹೊರಗಡೆ ಗಂಡ ದೇಶಸೇವೆಗೆ ಹೋರಾಡಿದರೆ ಅವನ ಪತ್ನಿ ಅವನಿಲ್ಲದೆ ಅವನದ್ದೇ ಕುಟುಂಬದಲ್ಲಿ ಅವನ ಹೆತ್ತವರ ವಿಕ್ಷಿಪ್ತವೂ, ಅಮಾನುಷವೂ ಕ್ರೂರವೂ ಆದ ಮನೋಭಾವದೊಂದಿಗೆ ಹೇಗೆ ನಿತ್ಯವೂ ಹೋರಾಡಬೇಕಾಗುತ್ತದೆ ಅನ್ನುವುದನ್ನೂ ಬಹಳ ತಾರ್ಕಿಕವಾಗಿ, ನಾಜೂಕಾಗಿ ತೆರೆದಿಟ್ಟಿದ್ದಾರೆ.  

ಈ ಕಿರುಹೊತ್ತಿಗೆ ಒಂದು ಕೃತಿಯಾಗಿ ಎಷ್ಟು ಸಾಫಲ್ಯ ಪಡೆದಿದೆ ಅನ್ನುವ ಪ್ರಶ್ನೆ ಎದುರಾದಾಗ ಇಲ್ಲಿನ ಭಾಷೆ, ಆ ಭಾಷೆ ಅಭಿವ್ಯಕ್ತಿಯಲ್ಲಿ ಹರಿದು ಹರಳುಗಟ್ಟಿದ ಪರಿ, ಅನುಭವ ಕೃತಿಯಾಗುವಲ್ಲಿನ ಬಂಧ, ಒಬ್ಬ ಸೈನಿಕನ ಹೆಂಡತಿಯ ಒಡಲ ಆ ಒಂಟಿತನದ ನೆಲೆಯ ಒಟ್ಟು ಅಭಿವ್ಯಕ್ತಿಯ ಆದ್ರ್ರತೆ ಇವೆಲ್ಲವನ್ನೂ ದೃಷ್ಟಿಯಲ್ಲಿ ನೋಡಿದರೆ 'ವೈಫ್ ಆಫ್ ಸೋಲ್ಡರ್' ಮೊದಲ ದರ್ಜೆಯ ಕೃತಿಯಲ್ಲಿ ಸೋಲ್ಡರ್ ಶ್ರೇಷ್ಠ ಕೃತಿಯಲ್ಲ. ಉದ್ದಾಮವೂ ಆಗಲಾರದು. ಆದರೆ ಒಬ್ಬ ಸಾಮಾನ್ಯ ಗೃಹಿಣಿ, ಬರವಣಿಗೆ ತೊದಲು, ಚೊಚ್ಚಲ ಕೃತಿಯಿದು ಎಂಬ ಪರಿವೆ, ಪರಿಜ್ಞಾನದಲ್ಲಿ ನೋಡಿದರೆ, ಪರಿಭಾವಿಸಿದರೆ ನಿಜಕ್ಕೂ ಯಾವುದೇ ಕನ್ನಡದ ಮಹತ್ವದ ಲೇಖಕರ ಕೃತಿಗಳಿಗಿಂತ ಈ ಕೃತಿ ನನಗೆ ಮುಖ್ಯವಾಗಿ ಮೇಲ್ಮಟ್ಟದ್ದಾಗಿ ಕಾಣಿಸುತ್ತದೆ. 

(ಕೃಪೆ : ವಾರ್ತಾಭಾರತಿ, ಬರಹ : ಬಿ. ಗಣಪತಿ)

Related Books