ನೆನಪಿನ ಒರತೆ

Author : ಅಂಜನಾ ಹೆಗಡೆ

Pages 384

₹ 450.00
Year of Publication: 2023
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ನೆನಪಿನ ಒರತೆ’ ಎಚ್.ಎಸ್. ವೆಂಕಟೇಶಮೂರ್ತಿ ಅವರ ಸಾಹಿತ್ಯ ಕೇಂದ್ರಿತ ಆತ್ಮಕಥೆಯಾಗಿದೆ. ಅಂಜನಾ ಹೆಗಡೆ ಕೃತಿಯನ್ನು ನಿರೂಪಿಸಿದ್ದಾರೆ. ಎಚ್ಚೆಸ್ವಿ ಅವರ ವೈಯುಕ್ತಿಕ ಜೀವನದ ಹಲವಾರು ಸಂಗತಿಗಳು ಅವರ ‘ಅನಾತ್ಮ ಕಥನ’ದಲ್ಲಿ ಈಗಾಗಲೇ ಮನೋಜ್ಞವಾಗಿ ನಿರೂಪಣೆಗೊಂಡಿವೆ. ‘ನೆನಪಿನ ಒರತೆ’ಯಲ್ಲಿ ಅವರು ತಮ್ಮ ಸಾಹಿತ್ಯಿಕ ಜೀವನದ ಸ್ಮರಣೀಯ ಮೈಲುಗಲ್ಲುಗಳನ್ನು ಅತ್ಯಂತ ವಿನಯ ಮತ್ತು ವಸ್ತುನಿಷ್ಠವಾಗಿ ದಾಖಲಿಸಿದ್ದಾರೆ. ತಾವು ಎದುರಿಸಿದ ಪ್ರತಿರೋಧಗಳನ್ನು, ಸಾಹಿತ್ಯಿಕ ವಾಗ್ವಾದಗಳನ್ನು ಸಮಚಿತ್ತದಿಂದ ನಿಭಾಯಿಸಿದ ಅವರ ರೀತಿ ಇಂದಿನ ಮತ್ತು ಮುಂದಿನ ಎಲ್ಲ ಸಾಹಿತಿಗಳಿಗೂ ಮಾದರಿಯಾಗಬಲ್ಲವು. ಕವಿಯಾಗಿ ಮಾತ್ರವಲ್ಲದೆ, ಕನ್ನಡ ಸಂಘದ ಸಂಸ್ಥಾಪಕರಾಗಿ, ಪು.ತಿ.ನ ಟ್ರಸ್ಟಿನ ಅಧ್ಯಕ್ಷರಾಗಿ, ‘ಅಭ್ಯಾಸ’ ಎಂಬ ಹಳಗನ್ನಡ ಸಾಹಿತ್ಯದ ಉಪನ್ಯಾಸ ಮಾಲಿಕೆಯ ನಿರ್ದೇಶಕರಾಗಿ ಅವರು ಸಲ್ಲಿಸಿದ ಸೇವೆಯ ಮಾಹಿತಿಯೂ ಇಲ್ಲಿದೆ. ಹೀಗೆ ಕಳೆದ ಐದಾರು ದಶಕಗಳ ಪರೋಕ್ಷ ಕನ್ನಡ ಸಾಹಿತ್ಯ ಚರಿತ್ರೆಯಾಗಿ ಈ ಕೃತಿ ಮಹತ್ವದ ಸ್ಥಾನ ಪಡೆದಿದೆ.

About the Author

ಅಂಜನಾ ಹೆಗಡೆ

ಲೇಖಕಿ ಅಂಜನಾ ಹೆಗಡೆ ಹುಟ್ಟಿ ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ. ಮದುವೆಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹತ್ತು ವರ್ಷಗಳ ಕಾಲ ಬಿಪಿಓ ಒಂದರಲ್ಲಿ ಕೆಲಸ ಮಾಡಿದ ಅನುಭವವಿದ್ದು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. "ಕಾಡ ಕತ್ತಲೆಯ ಮೌನಮಾತುಗಳು" ಕವನ ಸಂಕಲನ ಹಾಗೂ "ಬೊಗಸೆಯಲ್ಲೊಂದು ಹೂನಗೆ" ಪ್ರಬಂಧಗಳ ಸಂಕಲನ ಪ್ರಕಟವಾಗಿವೆ. ಓದು-ಬರೆಹದ ಜೊತೆಗೆ ಗಾರ್ಡನಿಂಗ್ ನೆಚ್ಚಿನ ಹವ್ಯಾಸ. ...

READ MORE

Related Books