
ಲೇಖಕ ಪ್ರಕಾಶ್ ಕಂಬತ್ತಳ್ಳಿ ಅವರ ನಾಟಕ ಕೃತಿ ಆರದಿರಲಿ ಬೆಳಕು.ಡಾ. ಎಚ್.ಎನ್. ಮುರಳೀಧರ ಅವರು ಈ ಕೃತಿಗೆ ಬೆನ್ನುಡಿಯ ಮಾಉಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, "ಹರಿತವಾದ ಸಂಭಾಷಣೆಯೇ ಪ್ರಧಾನವಾಗಿರುವ ಪ್ರಕಾಶ್ ಕಂಬತ್ತಳ್ಳಿಯವರ ನಾಟಕಗಳು ಜೀವನದ ಮೇಲ್ಪದರಗಳನ್ನು ಚಿತ್ರಿಸುತ್ತಲೇ ಅದರ ಆಳಕ್ಕೂ ನಮ್ಮನ್ನು ಕರೆದೊಯ್ಯುತ್ತವೆ. ಬಹಳ ಸುಲಭವಾಗಿ ಕ್ಲೀಷೆಗಳ ಕಡೆಗೆ ಜಾರಿ ಬಿಡುವ ವಸ್ತು ಸನ್ನಿವೇಶಗಳನ್ನು ಆರಿಸಿಕೊಂಡೇ ಅದರಾಚೆಗೆ ಅವನ್ನ ತೆಗೆದುಕೊಂಡು ಹೋಗುವ ಕಂಬತ್ತಳ್ಳಿಯವರ ಕೌಶಲ ಮೆಚ್ಚುಗೆಗೆ ಪಾತ್ರವಾಗುತ್ತದೆ'' ಎಂಬುದಾಗಿ ಹೇಳಿದ್ದಾರೆ.
©2025 Book Brahma Private Limited.