
ಮಹಿಳೆಯರ ಪಾಲಿಗೆ ಶೈಕ್ಷಣಿಕ ಬೆಳಕಾದ ಸಾವಿತ್ರಿಬಾಯಿ ಫುಲೆ ಅವರ ಕುರಿತ ನಾಟಕ ಕೃತಿ ಇದು. ಸಾವಿತ್ರಿಬಾಯಿ ಫುಲೆಯವರ ದಿಟ್ಟ ವ್ಯಕ್ತಿತ್ವವನ್ನು, ಸ್ತ್ರೀಯರ ಶಿಕ್ಷಣಕ್ಕಾಗಿ ಅವತ್ತಿನ ಕಾಲದಲ್ಲಿ ಅತ್ಯಂತ ಧೈರ್ಯದ ಹೆಜ್ಜೆಯನ್ನಿಟ್ಟ ಅವರ ನಿಲುವನ್ನು ಕಾಣಿಸುತ್ತಲೇ, ಅವರ ಬದುಕನ್ನು ನಿರೂಪಿಸುವ ರಂಗಗೃತಿ ಇದಾಗಿದೆ. “ಇಲ್ಲಿನ ಬಹುತೇಕ ಮಾತುಗಳು ಒಂದು ರೀತಿಯಲ್ಲಿ ಸಾವಿತ್ರಿಬಾಯಿಯವರ ಸ್ವಗತಗಳೆನಿಸುತ್ತವೆ. ಆದರೆ ಮಾತುಗಳಲ್ಲಿನ ಭಾಷಾ ಸೊಗಸುಗಾರಿಕೆ ಮತ್ತು ಕಥನಶೈಲಿ ಪ್ರತಿ ದೃಶ್ಯಗಳ ಸಮಗ್ರ ವಿವರಗಳನ್ನು ಕಣ್ಮುಂದೆ ನಿಲ್ಲಿಸುವಷ್ಟು ಸಶಕ್ತವಾಗಿದೆ. ಸಾವಿತ್ರಿಬಾಯಿ ಇಂದಿನ ಪೀಳಿಗೆಯ ಕನಸಿಗೆ ಸ್ವತಃ ಬಂದು ತಮ್ಮ ಅಂದಿನ ಕ್ರಾಂತಿ ಕಥನ ಬಿಚ್ಚಿಡುವಂಥ ಅನುಭವವನ್ನು ಈ ನಾಟಕ ಓದುಗರಿಗೆ ಕಟ್ಟಿಕೊಡುತ್ತದೆ” ಎಂದು ಮುನ್ನುಡಿಯಲ್ಲಿ ದಿಲಾವರ ರಾಮದುರ್ಗ ಹೇಳಿದ್ದಾರೆ.
©2025 Book Brahma Private Limited.