ಸೀಕರ್ಣೆ ಸಾವಿತ್ರಿ

Author : ಟಿ.ಪಿ. ಕೈಲಾಸಂ

Pages 32

₹ 0.00




Year of Publication: 1942
Published by: ಬಿ.ಎಸ್. ರಾಮರಾವ್
Address: ಬೆಂಗಳೂರು

Synopsys

ಲೇಖಕ ಟಿ.ಪಿ. ಕೈಲಾಸಂ ಅವರು ಬರೆದ ಏಕಾಂಕ ನಾಟಕ-ಸೀಕರ್ಣೆ ಸಾವಿತ್ರಿ. ಈ ಕೃತಿಯನ್ನು ಬಿ.ಎಸ್. ರಾಮರಾವ್ ಅವರು ಸಂಪಾದಿಸಿದ್ದಾರೆ. 1943, 1945 ಹಾಗೂ 1968 ರಲ್ಲಿ ಹೀಗೆ ಕೃತಿಯು ಆವೃತ್ತಿಗಳನ್ನು ಕಂಡಿದೆ. ಲೇಖಕರ ಪ್ರಕಾರ ಈ ನಾಟಕವು ಏಕಾಂಕ, ಏಕ ರಂಗ, ಏಕಪಾತ್ರ ರೂಪಕ. ಹೀಗೆ ನಾಟಕಗಳ ಪ್ರಯೋಗಗಳಲ್ಲೇ ವಿನೂತನತೆಯನ್ನು ಕಾಣುವ ಹಂಬಲವನ್ನು ಇಲ್ಲಿ ಕಾಣಬಹುದು. ಜಿ.ಪಿ. ರಾಜರತ್ನಂ ಅವರು ಸೀಕರ್ಣೆ ಸಾವಿತ್ರಿ ನಾಟಕವನ್ನು‘ಕೈಲಾಸ ಕಥನ’ ಕೃತಿಯಲ್ಲಿ ಸಂಪಾದಿಸಿದ್ದರು.

About the Author

ಟಿ.ಪಿ. ಕೈಲಾಸಂ
(26 July 1885 - 23 November 1946)

ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...

READ MORE

Related Books