ಬೈ2 ಕಾಫಿ ಮತ್ತು ಮಾಗಡಿ ಡೇಸ್

Author : ಅಭಿಷೇಕ್ ಅಯ್ಯಂಗಾರ್

Pages 108

₹ 100.00




Year of Publication: 2021
Published by: ಚಾರುಮತಿ ಪ್ರಕಾಶನ
Address: #224, 4ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಚಾಮರಾಜಪೇಟೆ, ಬೆಂಗಳೂರು-560018,
Phone: 9448235553

Synopsys

ಅಭಿಷೇಕ್ ಅಯ್ಯಂಗಾರ್‍ ಅವರ ’ಬೈ2 ಕಾಫಿ ಮತ್ತು ಮಾಗಡಿ ಡೇಸ್’ ಎರಡು ನಾಟಕಗಳಾಗಿವೆ. ಪ್ರಸ್ತುತ ಸಂಕಲನದಲ್ಲಿ ಎರಡು ನಾಟಕಗಳು ಹೊಸ ಬಗೆಯ ನಿರೂಪಣೆಯಿಂದ ಕೂಡಿದೆ. ಮಾಗಡಿ ಡೇಸ್ ನಾಟಕದ ರಂಗಪ್ರಯೋಗ ಈಗಾಗಲೇ ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದು, ’ಬೈ2 ಕಾಫಿ ಮತ್ತು ಮಾಗಡಿ’ ನಾಟಕದ ವಸ್ತು ಮತ್ತು ನಿರೂಪಣೆ ಕನ್ನಡಕ್ಕೆ ಹೊಸತಾಗಿದೆ. ಇಲ್ಲಿ ಸಾಲುಗಳ ನಡುವೆ ’ ನಾಟಕ’ ಸಾಂದ್ರವಾಗಿ ಅಡಗಿದ್ದು, ಮಾತುಗಳ ನಡುವಿನ ಮೌನಗಳು ಹೊಸ ಅರ್ಥಗಳನ್ನು ಹುಟ್ಟಿಸುವಂತಿವೆ. ’ಮಾಗಡಿ ಡೇಸ್’ ಲೇಖಕರ ರಂಗಭೂಮಿ ಬದುಕನ್ನು ಬದಲಾಯಿಸಿದ ನಾಟಕವಾಗಿದ್ದು, ಬೆಂಗಳೂರಿನಲ್ಲಿ 25 ಕ್ಕೂ ಹೆಚ್ಚು ಪ್ರದರ್ಶನಗಳ ಯಶಸ್ಸನ್ನು ಕಂಡಿತ್ತು. ನಾಟಕ ಬರೆಯುವ ಸಾಕಷ್ಟು ವಿಧಿವಿಧಾನಗಳನ್ನು ಓದಿ , ಅರ್ಥೈಸಿಕೊಂಡು, ಆಧುನಿಕ, ಸರಳ ಕತೆಯನ್ನು ತೀರಾ ಭಾವನಾತ್ಮಕ ಆಗದೆ ಲೋಕದೃಷ್ಟಿಯಲ್ಲಿ ಹೆಣೆಯುವುದರ ಪ್ರಯತ್ನದಲ್ಲಿ ಹುಟ್ಟಿಕೊಂಡ ನಾಟಕವಿದು ಎನ್ನುತ್ತಾರೆ ಲೇಖಕ. ತಾಯಿ ಮಗನ ಸಂಬಂಧದಲ್ಲಿ ಉಂಟಾಗಬಹುದಾದ ಅನೇಕ ವಿಷಯಗಳನ್ನು: ಪಾತ್ರಗಳು ಮುಕ್ತ ಸಂಭಾಷಣೆಯ ಮುಖೇನ ವ್ಯಕ್ತಪಡಿಸಿ, ವಿಭಿನ್ನ ಅಭಿಪ್ರಾಯಗಳನ್ನು ಇಲ್ಲಿ ವಿಶ್ಲೇಷಿಸಿದ್ದಾರೆ.

About the Author

ಅಭಿಷೇಕ್ ಅಯ್ಯಂಗಾರ್

ಅಭಿಷೇಕ್ ಅಯ್ಯಂಗಾರ್ ಅವರು ಮೂಲತಃ ಬೆಂಗಳೂರಿನವರು. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಹತೆಯನ್ನು ಪಡೆದಿರುವ ಅವರು ಹವ್ಯಾಸಿ ರಂಗಭೂಮಿ ಕಲಾವಿದ. ನಿರ್ದೇಶಕ ಹಾಗೂ ನಾಟಕಕಾರರಾಗಿ 2006 ರಲ್ಲಿ ’ವಿ ಮೂವ್ ಥಿಯೇಟರ್ ’ ತಂಡವನ್ನು ಸ್ಥಾಪಿಸಿ ತಂಡದ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ನಿರ್ದೇಶಿಸಿದ ನಾಟಕಗಳು: ನಮ್ಮ ಮೆಟ್ರೋ(2010), ಮಾಗಡಿ ಡೇಸ್(2011-12), ಈ=ಎಂ ಸಿ(2014).  ನಾಟಕ ಸಂಯೋಜನೆ: ಅನಾವರಣ(2015-2016), ಮಾಲ್ಗುಡಿ ಡೇಸ್(2011-2012),. ಕೃತಿಗಳು: ಬೈ2 ಕಾಫಿ ಮತ್ತು ಮಾಗಡಿ ಡೇಸ್.       ...

READ MORE

Related Books