ನವನೀತ ರಾಮಾಯಣ

Author : ಮುಳಿಯ ತಿಮ್ಮಪ್ಪಯ್ಯ

Pages 107

₹ 8.00




Year of Publication: 1940
Published by: ಧರ್ಮಪ್ರಕಾಶನ
Address: ಮಂಗಳೂರು

Synopsys

‘ನವನೀತ ರಾಮಾಯಣ’ ಹಿರಿಯ ಲೇಖಕ ಮುಳಿಯ ತಿಮ್ಮಪ್ಪಯ್ಯನವರು ರಚಿಸಿರುವ ಪೌರಾಣಿಕ ನಾಟಕ. ವಾಲ್ಮೀಕಿ ರಾಮಾಯಣವನ್ನಾಗಲಿ, ಇನ್ನಾವ ರಾಮಾಯಣವನ್ನಾಗಲಿ ಹಿಂಬಾಲಿಸಿ ಬರೆದುದಲ್ಲ ಈ ಕೃತಿ.  ಕಥಾರಚನೆ ಆದ್ಯಂತವಾಗಿ ನವ-ನೀತವಾದುದೇ ಎನ್ನುತ್ತಾರೆ ಲೇಖಕ ಮುಳಿಯ ತಿಮ್ಮಪ್ಪಯ್ಯ. ಆ ಅರ್ಥಾನುಗುಣವಾಗಿಯೇ ಈ ಕಾವ್ಯದ ಹೆಸರನ್ನೂ ರೂಪಿಸಲಾಗಿದೆ. ಹೆಸರಿನಲ್ಲಿ ಹೊಳೆಯುವ ಶ್ಲೇಷಾರ್ಥದ ಸವಿ ಇದರೊಳಗಿದೆಯೋ, ಇಲ್ಲವೋ ಎಂಬುದನ್ನು ನಿರ್ಧರಿಸುವ ಅಧಿಕಾರವೆಂಬುದು ನನ್ನದಲ್ಲ- ಓದುಗರದ್ದು ಎನ್ನುತ್ತಾರೆ ಕರ್ತೃ. 

ಈ ಪ್ರಥಮ ಕಾಂಡದಲ್ಲಿ ಸೀತಾಲಕ್ಷ್ಮಣ ಸಮೇತನಾದ ಶ್ರೀರಾಮನು ವನವಾಸ ಅನುಭವಿಸುವವರೆಗಿನ ಕಥಾಭಾಗವು ಅಡಕವಾಗಿದೆ.

About the Author

ಮುಳಿಯ ತಿಮ್ಮಪ್ಪಯ್ಯ
(03 March 1888 - 04 January 1950)

ಕವಿ, ವಿಮರ್ಶಕ ಮುಳಿಯ ತಿಮ್ಮಪ್ಪಯ್ಯನವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ. ಮನೆಯಲ್ಲಿಯೇ ಕುಳಿತು ಸಂಸ್ಕೃತ ಕಲಿತ ಅವರು ಸಂಸ್ಕೃತಾಭ್ಯಾಸವನ್ನು ಮುಂದುವರೆಸಲು ತಿರುವಾಂಕೂರು ಹಾಗೂ ಮೈಸೂರಿಗೆ ಪ್ರಯಾಣ ಮಾಡಿದರು. 1911ರಲ್ಲಿ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದರು. ಮುದ್ದಣನ ರಾಮಾಶ್ವಮೇಧ ಚೌಕಟ್ಟಿನಲ್ಲಿ ಮೂಡಿ ಬಂದ ಕೃತಿ ‘ಚಂದ್ರಾವಳಿ ವಿಲಾಸ.’ ಭಾಗವತದಲ್ಲಿ ಬರುವ ಶಂಭಾಸುರನ ಕಥೆಯಾಧಾರಿತ ಹಳೆಗನ್ನಡದ ಛಂದಸ್ಸಿನಲ್ಲಿ ಮೂಡಿ ಬಂದದ್ದು ‘ಸೊಬಗಿನ ಬಳ್ಳಿ.’ ಕರ್ಣನ ಕುರಿತಾದ ಗದ್ಯ ಕಥನ ನಡೆಯನಾಡು-ಮಹಾಭಾರತದ ಕಥೆ ಆಧಾರಿತ. ಪ್ರೇಮಪಾಶವೆಂಬ ಮತ್ತೊಂದು ಕೃತಿ, ನೀತಿ ವಾಕ್ಯ ಆಧಾರಿತ ಕಾಲ್ಪನಿಕ ಕಥನ ಕಾವ್ಯ. ...

READ MORE

Related Books