ಕಾಲಿದಾಸ ಶಾಕುಂತಲ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 164

₹ 180.00




Year of Publication: 2023
Published by: ಅನನ್ಯ ಪ್ರಕಾಶನ
Address: ಧಾರವಾಡ

Synopsys

‘ಕಾಲಿದಾಸ ಶಾಕುಂತಲ’ ಹಿರಿಯ ಲೇಖಕ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ನಾಟಕ ಕೃತಿ. ಕೃತಿಯನ್ನು ವಿಮರ್ಶಿಸಿರುವ ಪ್ರಕಾಶ ಗಿರಿಮಲ್ಲನವರ ‘ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಕಾಲಿದಾಸ ಶಾಕುಂತಲ’ ನಾಟಕ ಕನ್ನಡ ರಂಗಭೂಮಿಗೆ ಹೊಸ ಅವತರಣಿಕೆಯಾಗಿ ಮೂಡಿ ಬಂದ ಒಂದು ಅತ್ಯುತ್ಕೃಷ್ಟ ರಂಗಪಠ್ಯ. ಕನ್ನಡದಲ್ಲಿ 1869ರಲ್ಲಿಯೇ ಚುರಮರಿ ಶೇಷಗಿರಿರಾಯರು ಕಾಳಿದಾಸ ಕವಿಯ ಶಾಕುಂತಲವನ್ನು ಕನ್ನಡಕ್ಕೆ ತಂದಿದ್ದರು. ತದನಂತರ ಮೈಸೂರು ಆಸ್ಥಾನ ವಿದ್ವಾನ್‌ರಾಗಿದ್ದ ಪ್ರಕಾಂಡ ಪಂಡಿತ ಸಂಸ್ಕೃತ-ಕನ್ನಡ ಉಭಯ ಭಾಷಾಪ್ರ‍ವೀಣ ಬಸವಪ್ಪ ಶಾಸ್ತ್ರಿಗಳು 1882ರಲ್ಲಿ ಶಾಕುಂತಲ ಮೂಲಪಠ್ಯವನ್ನು ಕನ್ನಡದಲ್ಲಿ ಅತ್ಯಂತ ಸಮರ್ಥವಾಗಿ ಅನುವಾದಿಸಿದ್ದರು. ತದನಂತರ ಬಿ. ಕೃಷ್ಣಪ್ಪ, ಎಸ್. ವಿ. ಪರಮೇಶ್ವರ ಭಟ್ಟ ಅವರ ಕೃತಿಗಳು ಕನ್ನಡದಲ್ಲಿ ಬಂದವು. ಹೀಗೆ ಹತ್ತಾರು ಜನ ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕವನ್ನು ಭಾಷಾಂತರ, ರೂಪಾಂತರ, ಕಥಾಂತರ ರೂಪದಲ್ಲಿ ಕನ್ನಡದಲ್ಲಿ ಅನುವಾದಿಸುತ್ತಲೇ ಬಂದಿದ್ದಾರೆ. ಕಾಲಮಾನಕ್ಕೆ ತಕ್ಕಂತೆ ಭಾಷೆ-ಶೈಲಿಗಳು ಬದಲಾಗುತ್ತಲೇ ಬಂದಿವೆ. ಈಗ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಪ್ರಸ್ತುತ ಶಾಕುಂತಲ ನಾಟಕ ವರ್ತಮಾನದ ಸಂದರ್ಭದಲ್ಲಿ ತನ್ನ ನವನವೋನ್ಮೇಷಶಾಲಿತ್ವದಿಂದ, ಹೃದಯಸ್ಪರ್ಶಿಯಾಗಿ ಮೂಡಿ ಬಂದಿದೆ ಎಂದಿದ್ದಾರೆ.

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books