ಮಕ್ಕಳಿವರೇನಮ್ಮ

Author : ಬಿ.ಎಸ್. ವೆಂಕಟರಾಮ್

Pages 84

₹ 4.00




Year of Publication: 1937
Published by: ಬಿ. ಎಸ್. ವೆಂಕಟರಾಮ್

Synopsys

ಮಕ್ಕಳಿವರೇನಮ್ಮ ಎಂಬ ಪುಸ್ತಕವು ಬಿ. ಎಸ್. ವೆಂಕಟರಾಮ್ ಅವರ ನಾಟಕ ಕೃತಿಯಾಗಿದೆ. “ಚಾರಿತ್ರಹೀನೆ'ಯರೆಂದು ಸಮಾಜದಲ್ಲಿ ಕಡೆಗಣನೆಗೆ ಒಳಗಾದವರ ಪರ ವಿಶಿಷ್ಟ ಕಳಕಳಿಯೊಂದು ಇಲ್ಲಿನ ನಾಟಕಗಳಲ್ಲಿ ವ್ಯಕ್ರಿವಾಗಿದೆ. ಕೇವಲ ನಿತ್ಯ ಜೀವನದ ಸತ್ಯ ವಿಚಾರವನ್ನು ಅವುಗಳಲ್ಲಿ ಕೊಟ್ಟಿರುವೆನೆಂದು ಲೇಖಕರು ಈ ಪುಸ್ತಕದ ಬಗ್ಗೆ ವಿವರಿಸಿದ್ದಾರೆ.

About the Author

ಬಿ.ಎಸ್. ವೆಂಕಟರಾಮ್
(16 November 1911)

ಲೇಖಕ ಬಿ.ಎಸ್. ವೆಂಕಟರಾಮ್ ಅವರು ಮೂಲತಃ ಬೆಂಗಳೂರಿನವರು. ತಂದೆ-ಬಿ.ವಿ. ಸುಬ್ಬರಾವ್, ತಾಯಿ- ಗೌರಮ್ಮ. ರಂಗಭೂಮಿ ಹಾಗೂ ಪತ್ರಿಕಾರಂಗದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, 14ನೇ ವಯಸ್ಸಿನಲ್ಲಿಯೇ ಶಶಿರೇಖಾ ಪರಿಣಯದ ಕೃಷ್ಣನಾಗಿ ರಂಗಪ್ರವೇಶ ಪಡೆದರು. ಕೈಲಾಸಂ ಅವರ ಗರಡಿಯಲ್ಲಿ ಪಳಗಿದರು. ಅಲ್ಲಿಂದ ಹಲವಾರು ನಾಟಕಗಳಲ್ಲಿ ನಟಿಸಿದರು. ಕೈಲಾಸಂರ ಬಹಳಷ್ಟು ನಾಟಕಗಳ ಲಿಪಿಕಾರರಾಗಿಯೂ ದುಡಿದರು. ಇವರ ನಿರ್ದೇಶನದ ಚಲನಚಿತ್ರ- ‘ಬಹದ್ದೂರ್ ಗಂಡು. ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಸರಕಾರದ ರಂಗಭೂಮಿ ಸಲಹಾ ಸಮಿತಿ ಅಧ್ಯಕ್ಷರಾಗಿ, ಸಂಗೀತ ನಾಟಕ ಅಕಾಡಮಿಯ ಹಲವಾರು ಕಾರ್ಯಕ್ರಮಗಳ ರೂವಾರಿಯಾಗಿ, ಪಶ್ಚಿಮ ಬಂಗಾಲದ ಸಂಗೀತ ನಾಟಕ ಅಕಾಡಮಿಯ ಸಮೀಕ್ಷಕರಾಗಿ, ರಾಜ್ಯದ ನಾಟಕ ಪಠ್ಯಪುಸ್ತಕ ...

READ MORE

Related Books