ಎಂಗ್ಟನ ಪುಂಗಿ

Author : ಅ.ನಾ. ರಾವ್ ಜಾದವ್

Pages 64

₹ 55.00




Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ತೇಜಸ್ವಿ ಅವರ ”ಪರಿಸರದ ಕಥೆಗಳು’ ಕೃತಿಯಲ್ಲಿ ಒಂದು ಕಥೆ-ಎಂಗ್ಟನ ಪುಂಗಿ. ನಾಗರಿಕತೆ ಬೆಳೆದಂತೆಲ್ಲ ಹಾವುಗೊಲ್ಲ ಎಂಗ್ಟನ ಎಷ್ಟೇ ಕೈ ಚಳಕ, ಚಾಲಾಕಿತನ ಇದ್ದರೂ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾಗುವುದು. ಆಧುನಿಕ ಜಗತ್ತಿನಲ್ಲಿ ಅವನ ನಾಟಿ ಔಷಧಿಗಳು ಬೆಲೆ ಕಳೆದುಕೊಂಡಿದ್ದವು. ಕಾಡಿನ ಮೃಗ, ಪಕ್ಷಿ, ನದಿ, ಝರಿ ಎಲ್ಲವೂ ಅವಸಾನದ ಅಂಚಿಗೆ ಬಂದಿರುವಂತೆ ಎಂಗ್ಟನ ಅವಸಾನವೂ ಆಗುವುದೇ ಈ ಕಥೆಯ ವಸ್ತು. ಈ ಕಥೆಯನ್ನೇ ಅ. ನಾ. ರಾವ್ ಜಾಧವ್ ಅವರು ನಾಟಕಕ್ಕೆ ರೂಪಾಂತರಿಸಿದ್ದೇ ಈ ಕೃತಿ.

About the Author

ಅ.ನಾ. ರಾವ್ ಜಾದವ್

 ನಟನೆ, ನಾಟಕ ರಚನೆ, ನಿರ್ದೇಶನ, ಚಾರಣ, ಛಾಯಾಗ್ರಹಣ, ಬರವಣಿಗೆ, ಪಕ್ಷಿವೀಕ್ಷಣೆ, ಮರ-ಗಿಡಗಳ ಅಧ್ಯಯನ... ಹೀಗೆ ಅನೇಕ ಕ್ಷೇತ್ರಗಳನ್ನು ಹಚ್ಚಿಕೊಂಡವರು-ಅ ನಾ ರಾವ್ ಜಾದವ್. ಅನೇಕ ನಾಟಕಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಿರ್ದೆಶಿಸಿದ್ದಾರೆ. ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಮತ್ತು ‘ಕರ್ವಾಲೊ’ ಕೃತಿಗಳನ್ನಾಧರಿಸಿ ನಾಟಕಗಳನ್ನು ರಚಿಸಿದ್ದಾರೆ. ‘ಬೆಕ್ಕಿಗೆ ಘಂಟೆ ಕಟ್ಟಿದವರು ಯಾರು?’ ಎಂಬ ಮಕ್ಕಳ ನಾಟಕವನ್ನೂ ರಚಿಸಿದ್ದಾರೆ. ‘ಹಿಮಗಿರಿಯ ಕಣಿವೆಗಳಲ್ಲಿ’ ಇವರ ಪ್ರಕಟಗೊಂಡಿರುವ ಚಾರಣ ಕಥನ ಕೃತಿ. ‘ಪ್ರಕೃತಿ-ಪರಂಪರೆ’ ಕುರಿತಾದ ಇವರ ಅಸಂಖ್ಯ ಚಿತ್ರ-ಲೇಖನಗಳು ನಾಡಿನ ಪ್ರಸಿದ್ಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರ ಅನೇಕ ಹನಿಗವನಗಳೂ ಪ್ರಕಟಗೊಂಡಿವೆ. ...

READ MORE

Related Books