
‘ಶಕ್ತಿ ಮತ್ತು ಅಂತ’ ಎ.ಎನ್. ರಮೇಶ್ ಗುಬ್ಬಿ ಅವರ ಅವಳಿ ನಾಟಕಗಳ ಸಂಕಲನ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಎ.ಎನ್. ರಮೇಶ್ ಗುಬ್ಬಿ ಅವರು ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿಯಾದ್ದಾರೆ. ಇದರೊಂದಿದೆ ಸಾಹಿತ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ರಮೇಶ್ ಗುಬ್ಬಿ ಅವರು ಕತೆ, ಕವನ, ಚಿತ್ರಕಥೆ ರಚನೆ ಜೊತೆಗೆ ನಾಟಕಗಳನ್ನು ರಚಿಸಿದ್ದಾರೆ. ಈ ಕೃತಿಗೆ ನಟ, ನಿರ್ದೇಶಕ ಎಚ್.ಜಿ. ಸೋಮಶೇಖರರಾವ್, ಹಾಗೂ ಮಂಡ್ಯ ರಮೇಶ್ ಅವರ ಬೆನ್ನುಡಿ ಬರಹಗಳಿವೆ. ಕೃತಿ ಮತ್ತು ಕೃತಿಕಾರರ ಬಗ್ಗೆ ಬರೆಯುತ್ತಾ ನಮಗೆಲ್ಲಾ ಬೆಳಕನ್ನು ಕೊಡುವ ಕೆಲಸದಲ್ಲಿ ನಿರತರಾಗಿರುವ ಈ ಕೈಗಾದ ಮೂಲಕ ರಮೇಶ್ ರವರಿಂದ ಮತ್ತಷ್ಟು ಬೆಳಕು ಕಾಣುವ ಕೆಲಸಗಳ ಸಾಧ್ಯತೆ ಸ್ಪಷ್ಟವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಅಂತ ನಾಟಕದ ಮುನ್ನುಡಿಯಲ್ಲಿ ಕರ್ನಾಟಕ ತುಂಬೆಲ್ಲ ಪ್ರಬಲ ರಂಗ ಚಳುವಳಿಯ ಗಾಳಿ ತುಂಬಿರುವ ಈ ಗಳಿಗೆಗಳಲ್ಲಿ ಈ ಪುಟ್ಟ ನಾಟಕದ ದೊಡ್ಡ ದನಿಗೆ ಸಲಾಮ್ ಹೇಳಲೇಬೇಕು ಎಂದು ಮಂಡ್ಯ ರಮೇಶ್ ಭರವಸೆಯ ಮಾತುಗಳನ್ನಾಡಿದ್ದಾರೆ.
©2025 Book Brahma Private Limited.