ಬಿರುಕು (ನಾಟಕ)

Author : ಪಿ. ಲಂಕೇಶ್

Pages 86

₹ 36.00




Year of Publication: 2010
Published by: ಲಂಕೇಶ ಪ್ರಕಾಶನ
Address: # ಗಾಂಧಿ ಬಜಾರ, ಬಸವನಗುಡಿ, ಬೆಂಗಳೂರು

Synopsys

ಪತ್ರಕರ್ತ ಹಾಗೂ ಸಾಹಿತಿ ಪಿ. ಲಂಕೇಶ್ ಅವರ ನಾಟಕ-ಬಿರುಕು. 1973ರಲ್ಲಿ ಈ ನಾಟಕ ರಚಿಸಿದರು. ಅಂತಿಗೊನೆ ಮತ್ತು ಈಡಿಪಸ್ ಹೀಗೆ ಉತ್ತಮ ಕೃತಿಗಳನ್ನು ಅನುವಾದಿಸಿರುವ ಲಂಕೇಶರು, ತಮ್ಮ ಸ್ವಂತ ರಚನೆಯಾಗಿ ‘ಬಿರುಕು’ ನಾಟಕವನ್ನು ಸಾಮಾಜಿಕ ಪ್ರದರ್ಶನದ ಮೌಲ್ಯವಾಗಿ ಪರಿವರ್ತಿಸಿದ್ದಾರೆ. ಪರಿಣಾಮಕಾರಿ ಸಂಭಾಷಣೆ, ಸನ್ನಿವೇಶಗಳ ಜೋಡಣೆ, ಆ ಮೂಲಕ ನೀಡುವ ಸಂದೇಶ ಇತ್ಯಾದ ಸಾಹಿತ್ಯಕ ಅಂಶಗಳಿಂದ ಈ ನಾಟಕವು ಪ್ರೇಕ್ಷಕರ .ಹಾಗೂ ಓದುಗರ ಗಮನ ಸೆಳೆಯುತ್ತದೆ.

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Related Books