ಪೋಲೀ ಕಿಟ್ಟಿ

Author : ಟಿ.ಪಿ. ಕೈಲಾಸಂ

Pages 164

₹ 5.00




Year of Publication: 1967
Published by: ಬಿ. ಎಸ್. ರಾಮ ರಾವ್

Synopsys

ಪೋಲೀಕಿಟ್ಟಿ ಟಿ ಪಿ ಕೈಲಾಸಂ ಅವರ ನಾಟಕ ಕೃತಿ. 'ಪೋಲೀ ಕಿಟ್ಟಿ' ಮೊದಲ ಸಲ ಬೆಂಗಳೂರು ಬಸವನಗುಡಿ ದೇಶೀಯ ವಿದ್ಯಾಶಾಲಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಇ ಕೃತಿ, ಒಂದು ಅಪರೂಪದ ಣಾಟಕ ಕೃತಿ. ಕೈಲಾಸಂ ಅವರು ಸಮಾಜ ಅಥವಾ ಕೌಟುಂಬಿಕ ನೆಲೆಯೊಳಗಿನ ಹುಳುಕುಗಳನ್ನು ಯಾವ ಮುಲಾಜೂ ಇಲ್ಲದೆ ಎತ್ತಿ ತೋರಿಸಬಲ್ಲವರಾಗಿದ್ದರು. ಇಲ್ಲಿಯೂ ಅಮತ ಕೆಲಸವಾಗಿದೆ. 

About the Author

ಟಿ.ಪಿ. ಕೈಲಾಸಂ
(26 July 1885 - 23 November 1946)

ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ...

READ MORE

Related Books