ಮಾರೀಕಾಡು

Author : ಚಂದ್ರಶೇಖರ ಕಂಬಾರ

₹ 50.00




Year of Publication: 2012
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಡಾ. ಚಂದ್ರಶೇಖರ ಕಂಬಾರ ಅವರ ನಾಟಕ ಕೃತಿ ‘ಮಾರೀಕಾಡು. ಆಂಗ್ಲ ನಾಟಕಕಾರ ವಿಲಿಯಂ ಷೇಕ್ಸ್ ಪಿಯರ್ ನ ಮ್ಯಾಕ್ ಬೆತ್ ನಾಟಕ ಆಧಾರಿತ ಕೃತಿ ಇದು. ಮೂಲ ನಾಟಕದಲ್ಲಿಯ ಮ್ಯಾಕ್ ಬೆತ್ ಮಾರೀಕಾಡುನಲ್ಲಿ ಮದಕರಿಯಾಗಿ ಹಾಗೂ ಮೂಲದ ಬರ್ನಮ್, ಕಂಬಾರರ ನಾಟಕದಲ್ಲಿ ಮಾರೀಕಾಡು ಆಗಿ ಪರಿವರ್ತನೆಗೊಂಡಿದೆ. ಪಕ್ಕಾ ಕನ್ನಡ ಜಾನಪದೀಯ ಶೈಲಿಯಲ್ಲಿ ನಾಟಕವು ರೂಪುಗೊಂಡಿದೆ. ಕಾಡಿನ ರಹಸ್ಯಗಳನ್ನು ಅರಿಯದೇ ನಾಶಗೊಳ್ಳುವ ಮನುಷ್ಯ ಹಾಗೂ ಅಧಿಕಾರದ ಹಪಾಹಪಿಯು ನಾಟಕದ ಮೂಲ ಕೇಂದ್ರವಾಗಿದೆ. ಇಂಗ್ಲಿಷ್ ನಾಟಕದ ಕಥೆಯಾದರೂ ಅದು ಕನ್ನಡ ಜಾನಪದೀಯವಾಗಿ ಉಸಿರಾಡುತ್ತದೆ. ಅನ್ಯಭಾಷೆಯ ಸಾಹಿತ್ಯವನ್ನು ಎಷ್ಟು ಚೆನ್ನಾಗಿ ಕನ್ನಡೀಕರಿಸಬಹುದು ಎಂಬುದಕ್ಕೆ ಮಾರೀಕಾಡು ನಾಟಕ ಕನ್ನಡಿ ಹಿಡಿಯುತ್ತದೆ.

About the Author

ಚಂದ್ರಶೇಖರ ಕಂಬಾರ
(02 January 1937)

ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ   ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ.  ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು.  ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.  ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು  ಪಿ.ಎಚ್.ಡಿ ಪದವಿಗಳನ್ನು ಪಡೆದರು.  ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು.  ಹಂಪಿಯ ...

READ MORE

Related Books