ತೂಕದವರು

Author : ಪ್ರಕಾಶ ಗ. ಖಾಡೆ

Pages 40

₹ 12.00




Year of Publication: 1993
Published by: ಅನಿಕೇತ್ ಪ್ರಕಾಶನ
Address: ಲೋಕಾಪುರ, ಮುಧೋಳ ತಾ, ಬಾಗಲಕೋಟೆ ಜಿಲ್ಲೆ
Phone: 9845500890

Synopsys

ರಾಜಕೀಯ ವಿಡಂಬನೆ ಸಾರುವ ರಂಗ ಕೃತಿ-ತೂಕದವರು. ಪ್ರಕಾಶ ಖಾಡೆ ಅವರ ಮೊದಲ ನಾಟಕ ಕೃತಿ. ಕಂಗೆಡಿಸುತ್ತಿರುವ ಕರಾಳ ಬಡತನ,ಹೆಚ್ಚುತ್ತಿರುವ ಜಾತಿ, ಮತ, ಪಂಥಗಳ ಪೈಶಾಚಿಕ ನರ್ತನ, ಕೊನೆಗಾಣದ ಅಜ್ಞಾನ ಹಾಗೂ ಹದ್ದು ಮೀರಿರುವ ನೈತಿಕ ಅಧಃಪತನ ,ರಾಜಕೀಯ ವ್ಯವಸ್ಥೆಯನ್ನು ಹೇಗೆ ಅರ್ಥಹೀನಗೊಳಿಸುತ್ತವೆ ಎನ್ನುವ ಸಮರ್ಥ ಕಾಲೋಚಿತ ನಿರೂಪಣೆ ಇಲ್ಲಿದೆ.

About the Author

ಪ್ರಕಾಶ ಗ. ಖಾಡೆ
(10 June 1965)

ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...

READ MORE

Related Books