
ಬೆಟಗೇರಿ ಕೃಷ್ಣಶರ್ಮ ಹಾಗೂ ಗೆಳೆಯರ ಗುಂಪಿನ ಕೃಷ್ಣಕುಮಾರ ಕಲ್ಲೂರು ಅವರು ‘ತಿರಕರ ಪಿಡುಗು’ ಸಂಪಾದಿಸಿದ್ದಾರೆ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ತಿರಕರ ಪಿಡುಗು, ಕೃಷ್ಣಕುಮಾರ ಕಲ್ಲೂರು ಅವರ ಹಾಳ್ ಗಂಡು ಮತ್ತು ರಾಯರ ಮದುವೆ ಕೃತಿಗಳು ಒಳಗೊಂಡಿವೆ. ಈ ನಾಟಕಗಳು ಹುಚ್ಚಾಟಗಳೇ ಎಂದು ಲೇಖಕರು ಅಭಿಪ್ರಾಯಪಟ್ಟು, ಹುಚ್ಚಾಟಗಳ ಭಾಷೆಯು ಆಡು ಭಾಷೆಯಾಗಿಸುವುದೇ ಮೇಲು ಎಂದೂ ಸಮರ್ಥಿಸಿಕೊಂಡಿದ್ದಾರೆ. ಮೊದಲೆರಡು ಹುಚ್ಚಾಟಗಳು ವ್ಯಂಗ್ಯಚಿತ್ರಗಳಂತೆ ಮತ್ತು ಸೂಕ್ಷ್ಮ ವಾದ ಅಣಕಗಳಂತಿವೆ. ಮೂರನೇ ಹುಚ್ಚಾಟವು ಬದುಕಿನ ಒಂದು ನಾಟಕ. ಧಾರವಾಡ ಪ್ರಾಂತದ ಹೊರಗಿನವರಿಗೆ ಇಲ್ಲಿಯ ಭಾಷೆಯ ಶಬ್ದಗಳು, ಪ್ರಯೋಗಗಳು ವಿಲಕ್ಷಣವಾಗಿ ತೋರಬಹುದು ಎಂದು ಹೇಳುವ ಮೂಲಕ ಹುಚ್ಚಾಟಗಳ ಭಾಷೆಯು ಪಕ್ಕಾ ದೇಸಿ ಎಂದು ಹೇಳಿದ್ದಾರೆ. ಸಾಹಿತ್ಯದ ಬೇರು ಆಡುಭಾಷೆಯಲ್ಲೇ ಬೆರೆತುಕೊಂಡಿದೆ ಎಂಬ ಭಾಷಾ ತಜ್ಞರ ಮಾತು ಇಲ್ಲಿಯ ಹುಚ್ಚಾಟಗಳ ಶ್ರೇಷ್ಠತೆಗೆ ಸಾಕ್ಷಿ ನುಡಿಯುತ್ತವೆ.
©2025 Book Brahma Private Limited.