
ಶ್ರೀರಂಗ ಅವರು ಬರೆದ ನಾಟಕಗಳ ಪೈಕಿ -ಹರಿಜನ್ವಾರ ನಾಟಕವು ಬಹುವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ರಂಗಭೂಮಿಯ ಸೊಬಗು-ಸಾರ್ಥೈಕ್ಯವನ್ನು ಹೆಚ್ಚಿಸಿತ್ತು. ಆಚಾರ-ವಿಚಾರಗಳಿಗೆ ಸಂಬಂಧ ಇರಬೇಕು ಎಂಬ ಒತ್ತಾಸೆ ನಾಟಕದಲ್ಲಿ ಇದೆ. ಬ್ರಾಹ್ಮಣ ಎಂದು ಹೇಳಿಕೊಳ್ಳುವವರು, ಜನಿವಾರದ ಮೇಲೆ ಆಣೆ ಮಾಡುವವರು ಮೊದಲು ಜನಿವಾರದ ನಡುವೆ ಹುದುಗಿರುವ ಹೃದಯವನ್ನು ಪರೀಕ್ಷಿಸಿಕೊಳ್ಳಬೇಕು ಎಂಬ ಕ್ರಾಂತಿಕಾರಿ ಸಂದೇಶವೂ ಇದೆ. ಜಾತಿ ಹೆಗ್ಗಳಿಕೆಯ ಜನಕ್ಕೆ ಕೇವಲ ತೋರಿಕೆ ಬೇಕು, ತತ್ವ ಬೇಡ ಎಂಬ ವ್ಯಂಗ್ಯವೂ ಇದೆ. ಹೃದಯದಲ್ಲಿ ಪರಮಾತ್ಮನು ಇಲ್ಲದೇ ಹೋದರೆ ದೇಹಕ್ಕೆ ಅಂಟಿಕೊಳ್ಳುವ ಜನಿವಾರದ ಉಪಯೋಗವೇನು ಎಂದೂ ಲೇಖಕರು ನಾಟಕದ ಮೂಲಕ ಪ್ರಶ್ನಿಸುತ್ತಾರೆ.
‘ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ, ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ’ ಎಂದು ಕೇಳಿರುವ ಬಸವಣ್ಣನ ಪ್ರಶ್ನೆಯನ್ನು ಇಂದೂ ಕೇಳಿಕೊಳ್ಳಬೇಕಾಗಿದೆ ಎಂದೂ ಕೃತಿಗೆ ಬರೆದ ತಮ್ಮ ಮುನ್ನುಡಿಯಲ್ಲಿ ಗಮನ ಸೆಳೆದಿದ್ದಾರೆ.
©2025 Book Brahma Private Limited.