ಗುಮಾನಿ

Author : ಆರ್.ಎಸ್.ಗಿರಿ

Pages 92

₹ 150.00




Year of Publication: 2021
Published by: ನಂ ಮನೆ ಪ್ರಕಾಶನ
Address: ಸಾಗರ

Synopsys

‘ಗುಮಾನಿ’ ಆರ್‌.ಎಸ್‌. ಗಿರಿ ಅವರ ಸಾಮಾಜಿಕ ನಾಟಕವಾಗಿದೆ. ಗಿರಿಯವರ ಈ ನಾಟಕವನ್ನು ಕಂಡಾಗ ಅದಕ್ಕಿನ್ನೂ (ಮೊದಲ ಬರೆಹಕ್ಕೆ ಈಗ ಒಂದಿಷ್ಟು ಕಾಯಕಲ್ಪವಾಗಿದ್ದರೂ) ಲವಲವಿಕೆಯಿರುವುದೂ ಯಶಸ್ವಿ ಪ್ರಯೋಗಸಾಧ್ಯತೆಯ ಗುಣಗಳಿರುವುದೂ, ಆಕರ್ಷಕತೆಯಿರುವುದೂ ಗಮನಾರ್ಹವಾಗಿದೆ. ಹಾಗಾಗಿ ರಂಗತಂಡಗಳ/ನಿರ್ದೇಶಕರ ಗಮನವನ್ನು ಇದು ಮತ್ತೆ ಸೆಳೆಯಬಲ್ಲದು ಮತ್ತು ಪ್ರದರ್ಶನ ಕಾಣಬಲ್ಲುದು ಎಂಬ ನಿರೀಕ್ಷೆ ನನ್ನದು. ಯಾವುದೇ ಘೋಷಿತ ಸಾಮಾಜಿಕ ಬದಲಾವಣೆಯ ಅಥವಾ ಚಿಕಿತ್ಸಾ ಮನೋಧರ್ಮದ ನಿಲುವುಗಳ ಹೊರೆಯನ್ನು ಹೊರದೆ ಒಂದು ಕಥೆಯನ್ನು ಆಕರ್ಷಕವಾಗಿ ಹೇಳುವ ಕಡೆಗೆ 'ಗುಮಾನಿ'ಯಲ್ಲಿ ನಾಟಕಕಾರರ ಗಮನವಿದೆ. ಹಳ್ಳಿಯೊಂದರಲ್ಲಿ ನಡೆಯುವ ಹಲವು ತೆರನಾದ ಹುನ್ನಾರಗಳು, ಈರ್ಷೆಗಳು, ಪ್ರಭಾವಬೀರುವಲ್ಲಿನ ಪೈಪೋಟಿಗಳನ್ನು ಎಳೆ ಎಳೆಯಾಗಿ ಚಿತ್ರಿಸುತ್ತ ಅನುಮಾನದ ವ್ಯೂಹವನ್ನು ನಾಟಕ ತೆರೆದಿಡುತ್ತದೆ.

About the Author

ಆರ್.ಎಸ್.ಗಿರಿ

ಆರ್.ಎಸ್.ಗಿರಿ ಅವರು ಮೈಸೂರಿನಲ್ಲಿ ಸುಮಾರು 50 ವರ್ಷಗಳ ಕಾಲ ನೆಲೆಸಿದರು. ತಮ್ಮ ನಿವೃತ್ತಿಯ ನಂತರ ಸಾಗರದ ಗೆಣಸಿನಕುಣಿಯಲ್ಲಿ ನೆಲೆಸಿದ್ದಾರೆ. ಅವರು ವ್ಯವಸಾಯವನ್ನು ಮಾಡುತಿದ್ದಾರೆ. ಕೃತಿಗಳು : ಹಾಗೆ ಹೀಗೆ ...

READ MORE

Related Books